×
Ad

ಕಿನ್ಯ: ಎಸ್‌ವೈ‌ಎಸ್‌ನಿಂದ "ತಜ್'ದೀದ್" ಸಂಗಮ

Update: 2024-08-23 16:58 IST

ಉಳ್ಳಾಲ, ಆ. 23: ಸುನ್ನೀ ಯುವಜನ ಸಂಘ ದೇರಳಕಟ್ಟೆ ಝೋನ್ ಸಮಿತಿ ನಿರ್ದೇಶನದಂತೆ ಕಿನ್ಯ ಸರ್ಕಲ್ ವ್ಯಾಪ್ತಿಯಲ್ಲಿ ಸದಸ್ಯತ್ವ ಪಡೆದ ಕಾರ್ಯಕರ್ತರ "ತಜ್'ದೀದ್ ಮೆಂಬರ್ಸ್ ಇವನ್ಟ್" ಕೂಡಾರ ತಾಜುಲ್ ಫುಖಹಾಅ್ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಸರ್ಕಲ್ ಸಮಿತಿ ಅಧ್ಯಕ್ಷ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಕುರಿಯ ದಅ್‌ವಾ ಕಾರ್ಯದರ್ಶಿ ಮುಹಮ್ಮದ್ ರಫೀಖ್ ಝುಹ್ರಿ ಉದ್ಘಾಟಿಸಿದರು. ಕಲ್ಕಟ್ಟ ಇಲ್ಯಾಸ್ ಜುಮಾ ಮಸ್ಜಿದ್ ಖತೀಬ್ ಇಸ್ಹಾಖ್ ಸಖಾಫಿ ತರಗತಿ ನಡೆಸಿದರು.

ಕಿನ್ಯ ಸರ್ಕಲ್ ದಅ್‌ವಾ ಕಾರ್ಯದರ್ಶಿ ಉಮರುಲ್ ಫಾರೂಖ್ ಸಖಾಫಿ ಮೀಂಪ್ರಿ ಮುನ್ನುಡಿ ಭಾಷಣ ಮಾಡಿದರು, ಕಣ್ಣಂಗಾರ್ ಮುದರ್ರಿಸ್ ಅಶ್ರಫ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು.

ಕರ್ನಾಟಕ ಮುಸ್ಲಿಮ್ ಜಮಾಅತ್ ಕಿನ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಇಸ್ಮಾಯೀಲ್ ಹಾಜಿ ಸಾಗ್, ಬೆಳರಿಂಗೆ ಸಮಿತಿ ಅಧ್ಯಕ್ಷ ಅಬ್ಬಾಸ್ ಹಾಜಿ ಎಲಿಮಲೆ ಶುಭ ಹಾರೈಸಿ ಮಾತನಾಡಿದರು.

ತಾಜುಲ್ ಫುಖಹಾಅ್ ಮದ್ರಸ ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ ಉಕ್ಕುಡ, ಸರ್ಕಲ್ ಸಮಿತಿ ಕೋಶಾಧಿ ಕಾರಿ ಅಬ್ದುಲ್ ಹಮೀದ್ ಮೀಂಪ್ರಿ, ಸಾಂತ್ವನ ಕಾರ್ಯದರ್ಶಿ ಅಯ್ಯೂಬ್ ಖುತುಬಿನಗರ ಹಾಗೂ ಸರ್ಕಲ್ ವ್ಯಾಪ್ತಿಯ ಏಳು ಯುನಿಟ್ ಗಳ ನಾಯಕ, ಕಾರ್ಯಕರ್ತರು ಭಾಗವಹಿಸಿದ್ದರು.

ಸರ್ಕಲ್ ಸಮಿತಿ ಉಪಾಧ್ಯಕ್ಷ ಪಿ.ಎಂ. ಉಸ್ಮಾನ್ ಝುಹ್ರಿ ಕುರಿಯ ಸ್ವಾಗತಿಸಿದರು. ಇಸಾಬ ಕಾರ್ಯದರ್ಶಿ ಬಶೀರ್ ಲತೀಫಿ ಕುರಿಯ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News