×
Ad

ಕಿನ್ಯ: ಬೆಳರಿಂಗೆ ಶಾಲೆಯ ನೂತನ ಕೊಠಡಿ ಉದ್ಘಾಟನೆ

Update: 2024-02-10 13:47 IST

ಉಳ್ಳಾಲ: ಕೇವಲ ಎಂಟು ತಿಂಗಳಲ್ಲಿ ಬೆಳರಿಂಗೆ ಶಾಲೆ ಅಭಿವೃದ್ಧಿ ಆಗಲು ನೀವು ಕೊಟ್ಟ ಮತ ಕಾರಣ. ನಿಮ್ಮ ಮತದಿಂದಾಗಿ ನಾನು ಗೆದ್ದು ಬಂದ ಹಿನ್ನೆಲೆಯಲ್ಲಿ ಈ ರೀತಿ ಮಾಡಲು ಸಾಧ್ಯವಾಗಿದೆ. ಬೆಳರಿಂಗೆಯಲ್ಲಿ ಶಿಕ್ಷಣ ಬೆಳೆಯಬೇಕು. ಅಭಿವೃದ್ಧಿ ಕಾಣಬೇಕುಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿ, ಕಿನ್ಯ ಗ್ರಾಮ ದ ಬೆಳರಿಂಗೆ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಇವುಗಳ ಆಶ್ರಯದಲ್ಲಿ ವಿವೇಕ ಶಾಲಾ ಯೋಜನೆ ಯಡಿ ನಿರ್ಮಾಣ ಗೊಂಡ ಬೆಳರಿಂಗೆ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉನ್ನತ ಹಂತಕ್ಕೆ ತಲುಪಬೇಕು.ಜತೆಗೆ ಸೌಹಾರ್ದತೆ, ಒಗ್ಗಟ್ಟು, ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದರು. ಮುಂದಿನ ಹಂತದಲ್ಲಿ ಕಿನ್ಯ ಗ್ರಾಮಕ್ಕೆ ಹೈಸ್ಕೂಲ್ ಒದಗಿಸುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಅವರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಫಾರೂಕ್, ಕೆಡಿಪಿ ಸದಸ್ಯ ಹಮೀದ್, ಕಿನ್ಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಿರಾಜ್, ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆಸಿ, ಅಬೂಸಾಲಿ, ಎನ್ ಎಸ್ ಕರೀಂ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News