×
Ad

ಕಿನ್ಯ: ಮಾದಕ ದ್ರವ್ಯ ವಿರೋಧಿಸಿ ಜನ ಜಾಗ್ರತಿ ಸಭೆ

Update: 2023-11-05 17:06 IST

ಕಿನ್ಯ: ಮೂರನೇ ವಾರ್ಡ್ ನಾಗರೀಕ ಹಿತ ರಕ್ಷಣಾ ವೇದಿಕೆ ವತಿಯಿಂದ ಹುಸೈನ್ ಮುಸ್ಲಿಯಾರ್ ಮದ್ರಸ ಮೀಂಪ್ರಿ ವಠಾರದಲ್ಲಿ ಮಾದಕ ದ್ರವ್ಯ ವಿರೋಧಿಸಿ ಜನ ಜಾಗ್ರತಿ ಸಭೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಉಳ್ಳಾಲ ಠಾಣಾ ಸಬ್ ಇನ್ಸ್ಪೆಕ್ಟರ್ ಪ್ರಾಣೇಶ್ ಆಗಮಿಸಿದ್ದರು. ಉಸ್ತಾದ್ ಮಹರೂಫ್ ಸುಲ್ತಾನಿ ಅತೂರ್ ಮಾದಕ ದ್ರವ್ಯ ಇನ್ನಿತರ ಲಹರಿ ವಸ್ತುಗಳ ದುಶ್ಪರಿಣಾಮಗಳ ಬಗ್ಗೆ ವಿವರಿಸಿದರು. ಅಧ್ಯಕ್ಷತೆಯನ್ನು ಮಿಂಪ್ರಿ ಮದ್ರಸ ಹಾಗೂ ಮಸೀದಿ ಅಧ್ಯಕ್ಷ ಕೆ. ಎಂ.ಅಬ್ಬಾಸ್ ಮಿಂಪ್ರಿ ವಹಿಸಿದ್ದರು.

ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಫಾರೂಕ್ ಕಿನ್ಯ, ಸದಸ್ಯ ಸಂತೋಷ್ ಕುಮಾರ್ ಮೊಂತೆರೊ, ಹಮೀದ್ ಕಿನ್ಯ, ಜಗದೀಶ್ ಆಚಾರ್ಯ, ಹಮೀದ್ ಮಿಂಪ್ರಿ ಉಪಸ್ಥಿತರಿದ್ದರು.

ಸ್ಥಳೀಯ ಜನಪ್ರತಿನಿಧಿ ಸೈಯದ್ ತ್ವಾಹ ತಂಗಳ್ ಸ್ವಾಗತಿಸಿದರು. ಎಂಕೆಎಂ ಇಸ್ಮಾಯಿಲ್ ಮಿಂಪ್ರಿ ವಂದಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News