×
Ad

ಕಿನ್ಯ: ಧಾರ್ಮಿಕ ಉಪನ್ಯಾಸ ಉದ್ಘಾಟನೆ

Update: 2024-02-06 12:24 IST

ಉಳ್ಳಾಲ:ಕಿನ್ಯ ಕೇಂದ್ರ ಜುಮ್ಮಾ ಮಸೀದಿ ವತಿಯಿಂದ ನಡೆಯುವ ಐದು ದಿನಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯು ಕಿನ್ಯ ಕುತುಬಿಯಾ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಸಿ ಇಸ್ಮಾಯಿಲ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯಿದ್ ಶಿಹಾಬ್ ತಂಙಳ್ ಅಲ್ ಹುಮೈದಿ ಕಿನ್ಯ ದುಆ ನೆರವೇರಿಸಿದರು.

ಕಿನ್ಯ ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಬ್ದುಲ್ ಮಜೀದ್ ದಾರಿಮಿ ಅವರು ಮಾತನಾಡಿ, ಪ್ರವಾದಿವರ್ಯರ ಜೀವನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿದಾಗ ಮಾತ್ರ ನಾವು ಪರಿಪೂರ್ಣವಾಗಿ ವಿಜಯಿಗಳಾಗಲು ಸಾಧ್ಯ ಎಂದರು.

ಕಿನ್ಯ ಕುತುಬಿಯ ಮದ್ರಸ ಶಿಕ್ಷಕ ಫಾರೂಕ್ ದಾರಿಮಿ, ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ,ಕೋಶಾಧಿಕಾರಿ ಬಾವು ಹಾಜಿ ಸಾಗ್ ಮತ್ತಿತರರು ಉಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News