ಕೊಡಾಜೆ : ತರ್ಬಿಯತುಲ್ ಇಸ್ಲಾಂ ಮದ್ರಸದಲ್ಲಿ ಗಣರಾಜ್ಯೋತ್ಸವ
ಬಂಟ್ವಾಳ : ಕೊಡಾಜೆ ಬದ್ರಿಯಾ ಜುಮಾ ಮಸೀದಿ ಇದರ ಅಧೀನದ ತರ್ಬಿಯತುಲ್ ಇಸ್ಲಾಂ ಮದ್ರಸದ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಧ್ವಜಾರೋಹಣ ನೆರವೇರಿಸಿದರು.
ಮಸೀದಿ ಕಾರ್ಯದರ್ಶಿ ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ ಹಾಗೂ ಮದ್ರಸ ಉಸ್ತುವಾರಿ ಲತೀಫ್ ನೇರಳಕಟ್ಟೆ ಗಣರಾಜ್ಯೋತ್ಸವದ ಸಂದೇಶ ನೀಡಿದರು.
ಮಸೀದಿ ಕೋಶಾಧಿಕಾರಿ ಪಿ.ಕೆ.ಅಬ್ಬಾಸ್ ಪರ್ಲೊಟ್ಟು, ಜೊತೆ ಕಾರ್ಯದರ್ಶಿ ಸಾಹುಲ್ ಹಮೀದ್ ಪರ್ಲೊಟ್ಟು, ಸದಸ್ಯ ಫಾರೂಕ್ ಗೋಳಿಕಟ್ಟೆ, ನೇರಳಕಟ್ಟೆ ಮಿಲಾದ್ ಕಮಿಟಿ ಕಾರ್ಯದರ್ಶಿ ಇಲ್ಯಾಸ್ ನೇರಳಕಟ್ಟೆ, ಕೊಡಾಜೆ ಐಕ್ಯ ವೇದಿಕೆಯ ಸದಸ್ಯ ಸಮ್ಮಾಸ್ ನೇರಳಕಟ್ಟೆ, ಮದ್ರಸ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯ ಮನ್ಸೂರ್ ಕೊಡಾಜೆ, ಹಾಗೂ ಮದರಸ ಶಿಕ್ಷಕರು ಭಾಗವಹಿಸಿದ್ದರು.
ಮದ್ರಸ ಮುಖ್ಯ ಶಿಕ್ಷಕ ಸಿರಾಜುದ್ದೀನ್ ಫೈಝಿ ಅಲ್ ಮಹ್ ಬರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ಇಬ್ರಾಹಿಂ ಬಾತಿಷಾ ಇರ್ಫಾನಿ ವಂದಿಸಿದರು.