×
Ad

ಮಂಗಳೂರು | ಕೆಲಸ ಸಿಗದ ಕಾರಣ ಆತ್ಮಹತ್ಯೆ ಮಾಡಲು ಮರವೇರಿದ ಯುವಕ !

Update: 2026-01-26 23:27 IST

PC | GROK : ಸಾಂದರ್ಭಿಕ ಚಿತ್ರ

ಮಂಗಳೂರು, ಜ.26: ಕೆಲಸ ಸಿಗದ ಹಿನ್ನೆಲೆಯಲ್ಲಿ ಯುವಕನೊಬ್ಬ ಮರವೇರಿ ಕುಳಿತು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಾ ಕೆಲಹೊತ್ತು ಆತಂಕ ಸೃಷ್ಟಿಸಿರುವ ಘಟನೆ ನಗರದ ಕರಂಗಲ್ಪಾಡಿಯಲ್ಲಿ ಸೋಮವಾರ ಸಂಜೆ ನಡೆದಿದೆ.

ಬಾಗಲಕೋಟೆಯ ಭೀಮಪ್ಪ(24) ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದು ಬಂದಿದೆ.

ಪೊಲೀಸರು, ಅಗ್ನಿಶಾಮಕ ದಳದವರು, ಸ್ಥಳೀಯರ ನೆರವಿನಿಂದ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.

ಉದ್ಯೋಗ ಹುಡುಕಿಕೊಂಡು ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದ ಈತ ಕೆಲಸ ಸಿಗದ ಕಾರಣಕ್ಕಾಗಿ ಮನನೊಂದು ಮರವೇರಿ ಆತ್ಮಹತ್ಯೆ ಮಾಡುವ ಯೋಚನೆ ಮಾಡಿದ್ದ ಎನ್ನಲಾಗಿದೆ.

ಮರದಿಂದ ಇಳಿದ ಮೇಲೆ ಆತನನ್ನು ತಪಾಸಣೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News