×
Ad

ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಗಣರಾಜ್ಯೋತ್ಸವ ಆಚರಣೆ

Update: 2026-01-26 23:38 IST

ಮಂಗಳೂರು : ನವ ಮಂಗಳೂರು ಬಂದರು ಪ್ರಾಧಿಕಾರ ವತಿಯಿಂದ ಭಾರತದ 77ನೇ ಗಣರಾಜ್ಯೋತ್ಸವವನ್ನು ಇಂದು ಪಣಂಬೂರು ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಚರಿಸಲಾಯಿತು.

ಈ ಸಮಾರಂಭದ ಮುಖ್ಯ ಅತಿಥಿಯಾಗಿ ಎನ್ಎಂಪಿಎ ಉಪಾಧ್ಯಕ್ಷ (ಪ್ರಭಾರ) ಕ್ಯಾಪ್ಟನ್ ಮನೋಜ್ ಜೋಷಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿ ‘ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಜವಾಬ್ದಾರಿ ಇರುವುದನ್ನು ಅವರು ನೆನಪಿಸಿದರು. ರಾಷ್ಟ್ರ ನಿರ್ಮಾಣವು ಸಮೂಹ ಪ್ರಯತ್ನದಿಂದ ಮಾತ್ರ ಸಾಧ್ಯವೆಂದು ತಿಳಿಸಿದರು.

ಪಣಂಬೂರು ಕೇಂದ್ರಿಯ ವಿದ್ಯಾಲಯ ನಂ.1ರ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡಿದರು.

ಸಿಐಎಸ್ಎಫ್ ಸಿಬ್ಬಂದಿ, ಎನ್ಎಂಪಿಎ ಅಗ್ನಿಶಾಮಕ ದಳ, ಖಾಸಗಿ ಭದ್ರತಾ ಸಿಬ್ಬಂದಿ ಹಾಗೂ ಕೇಂದ್ರಿಯ ವಿದ್ಯಾಲಯ ಮತ್ತು ಎನ್ಎಂಪಿಎ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಒಳಗೊಂಡ ಪರೇಡ್ ಪಡೆ ಸಂಪ್ರದಾಯಬದ್ಧ ಪಥ ಸಂಚಲನ ನಡೆಸಿತು.

ಇದೇ ಸಂದರ್ಭದಲ್ಲಿ‘ವಂದೇ ಮಾತರಂ’ ಹಾಡಿನ 150ನೇ ವರ್ಷದ ಆಚರಣೆಯ ಅಂಗವಾಗಿ, ರಾಷ್ಟ್ರಗೀತೆಯ ಐತಿಹಾಸಿಕ ಪರಂಪರೆಯನ್ನು ಸ್ಮರಿಸುವ ಸಲುವಾಗಿ ಬಂದರು ನೌಕರರಿಂದ ವಿಶೇಷ ಸಮೂಹ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಎನ್ಎಂಪಿಎ ಅಧಿಕಾರಿಗಳು, ನೌಕರರು, ಸಿಐಎಸ್ಎಫ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಹೋಮ್ಗಾರ್ಡ್ಗಳಿಗೆ ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪತ್ರಗಳು ಮತ್ತು ನಗದು ಬಹುಮಾನಗಳನ್ನು ಪ್ರದಾನಿಸಲಾಯಿತು.

ಈ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಎನ್ಎಂಪಿಎ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಮತ್ತು ಪಣಂಬೂರು ಕೇಂದ್ರಿಯ ವಿದ್ಯಾಲಯ ನಂ.1ರ ವಿದ್ಯಾರ್ಥಿಗಳ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತಷ್ಟು ಸೊಗಸುಗೊಳಿಸಿತು.

ಇದೇ ಸಂದರ್ಭದಲ್ಲಿ ಸಿಐಎಸ್ಎಫ್ ಘಟಕ, ಶಿಸ್ತು, ಸನ್ನದ್ಧತೆ ಹಾಗೂ ತುರ್ತು ಪ್ರತಿಕ್ರಿಯೆಯ ಪ್ರದರ್ಶನಗಳು ನಡೆಸಲಾಯಿತು.

ಕಾರ್ಯಕ್ರಮವು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಎನ್ಎಂಪಿಎಯ ನಿರಂತರ ಬದ್ಧತೆಯನ್ನು ಪ್ರತಿಪಾದಿಸುವ ಮೂಲಕ ಸಮಾರೋಪಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News