×
Ad

ಕೊಡಿಯಾಲ್: ಮಳೆಯಿಂದ ಮನೆ ಹಾನಿಗೊಳಗಾದ ಸ್ಥಳಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಭೇಟಿ

Update: 2025-06-15 14:14 IST

ಮಂಗಳೂರು: ನಗರದ ಕೊಡಿಯಾಲ್ ಬೈಲಿನ ಪ್ರದೇಶದಲ್ಲಿ ಮನೆ ಸಂಪೂರ್ಣವಾಗಿ ನಾಶಗೊಂಡಿದ್ದು, ಈ ಪ್ರದೇಶಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ರವರು ಭೇಟಿ ನೀಡಿ ಕೂಡಲೇ ಸಂಪೂರ್ಣ ಬಿದ್ದ ಮನೆಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಮತ್ತು ತಹಶೀಲ್ದಾರ್ ರವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ಪ್ರಕೃತಿ ವಿಕೋಪದಲ್ಲಿ ನೀಡಬೇಕಾದ ಅನುದಾನವನ್ನು ಕೂಡಲೇ ನೀಡಬೇಕೆಂದು ಅವರ ಕುಟುಂಬಕ್ಕೆ ವಾಸಿಸಲು ವ್ಯವಸ್ಥೆ ಮಾಡಬೇಕೆಂದು ಪಾಲಿಕೆ ಕಮಿಷನರ್ ಮತ್ತು ಅಧಿಕಾರಿಗಳಿಗೆ ಸೂಚಿಸಿದರು.

ಅದೇ ರೀತಿ ಈ ಭಾಗದಲ್ಲಿ ಕೃತಕ ನೆರೆಗಳಿಂದ ಉಂಟಾದ ನಷ್ಟದ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯವರನ್ನು ಸಂಪರ್ಕಿಸಿ ಮಾತನಾಡಿದರು. ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ನಿರ್ಲಕ್ಷ್ಯ ವಹಿಸಿದ್ದರೆ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಪ್ರಕಾಶ್.ಬಿ.ಸಾಲಿಯನ್,ಮ.ನಾ.ಪಾ ಮಾಜಿ ನಾಮ ನಿರ್ದೇಶನ ಸದಸ್ಯರು ಪ್ರೇಮ್ ಬಳ್ಳಾಲ್ ಬಾಗ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು, ರವಿ ಸುಂಕದಕಟ್ಟೆ, ಕಾಂಗ್ರೆಸ್ ನಾಯಕರಾದ ಸುನಿಲ್ ಕುಮಾರ್ ಬಜಿಲಕೇರಿ, ದಿನೇಶ್ ಶಿವನಗರ ಹಾಗೂ ಕೊಡಿಯಲ್ ಬೈಲ್ ವಾರ್ಡಿನ ಸದಸ್ಯರುಗಳು ಜೊತೆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News