ಕೊಣಾಜೆ | ಮುಡಿಪು-ಪಾತೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ
ಕೊಣಾಜೆ: ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡಿಪು ನವೋದಯ ಬಳಿಯಿಂದ ಪಾತೂರುವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಶನಿವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ರಸ್ತೆ, ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿದರೆ ಊರಿನ ಅಭಿವೃದ್ಧಿ ಸಾಧ್ಯ. ವಾರದೊಳಗೆ ಎಲ್ಲೂ ಗುಂಡಿಗಳ ರಸ್ತೆ ಕಾಣಲು ಸಿಗದು. ಇದಕ್ಕೆ ಜನಸಾಮಾನ್ಯರು, ಧಾರ್ಮಿಕ ಮುಖಂಡರು, ಸಂಘ-ಸಂಸ್ಥೆಗಳು ಟ್ರೋಲ್ ಮಾಡಿದವರು ಕಾರಣ. ಎಲ್ಲಾದರು ಹೊಂಡಗಳಿರುವ ಫೊಟೋ ಕಳಿಸಿದರೆ ಮುಚ್ಚಲಾಗುವುದು ಎಂದು ಹೇಳಿದರು.
ಮಂಗಳೂರು ನಗರದಿಂದ ಮುಡಿಪುವರೆಗೆ ಕೇವಲ 20 ನಿಮಿಷ ತಲುಪುವಂತಹ ರಸ್ತೆ ಇದ್ದಾಗ ಜನರು ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಸಾಧ್ಯ ಎನ್ನುವ ಭಾವನೆ ನಮ್ಮದು. ಇದೀಗ ಮುಡಿಪು ಜಂಕ್ಷನ್ ನಿಂದ ಕೇರಳ ಸಂಪರ್ಕಿಸುವ ರಸ್ತೆ ಸುಸ್ಥಿರವಾಗಿಡಲು ಮೂರು ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಆದೂರು ತಂಙಳ್ ಶಿಲಾನ್ಯಾಸ ನೆರವೇರಿಸಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಮುಡಿಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಎಸ್.ನಾಸೀರ್ ನಡುಪದವು, ಪ್ರಧಾನ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ಕುರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವದಾಸ್ ಭಂಡಾರಿ, ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಗೀತಾ ಎಸ್.ಭಂಡಾರಿ, ಉಪಾಧ್ಯಕ್ಷ ಸಿ.ಎಂ.ಶರೀಫ್ ಪಟ್ಟೋರಿ, ಸದಸ್ಯರಾದ ಸಮೀಮಾ, ಅಂಜಲಿ, ಅಬ್ದುಲ್ ರಹ್ಮಾನ್, ಜನಾರ್ದನ ಕುಲಾಲ್, ಯಾಕೂಬ್ ಮುದುಂಗಾರ್, ಉಷಾ, ರಹ್ಮಾನ್ ತೋಟಾಲ್, ಜನಾರ್ದನ ಗಟ್ಟಿ, ಲಿಡಿಯಾ ಡಿಸೋಜ, ಆಸಿಫ್ ಮೋಂಟುಗೋಳಿ, ಹನೀಫ್ ಹೂಹಾಕುವಕಲ್ಲು, ಬಶೀರ್ ಸಾಜಿಗಾರ್, ಮಾಜಿ ಅಧ್ಯಕ್ಷೆ ಸುಕನ್ಯ ರೈ, ಇಬ್ರಾಹಿಂ ತಪ್ಷಿಯಾ ನಡುಪದವು, ಜಗದೀಶ್ ಪಲಾಯಿ, ಅರುಣ್ ಡಿಸೋಜ, ಡಾ.ಸುರೇಖಾ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹೈದರ್ ಕೈರಂಗಳ ಸ್ವಾಗತಿಸಿದರು.