×
Ad

ಆ. 11ರಂದು ಕೊರಮ್ಮ ತುಳು ಚಲನಚಿತ್ರ ಬಿಡುಗಡೆ

Update: 2023-08-10 14:14 IST

Photo:facebook.com/tulifilm

ಮಂಗಳೂರು, ಆ.10: ಸಫೈರ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾದ ‘ಕೊರಮ್ಮ’ ತುಳು ಚಲನಚಿತ್ರ ಆ. 11ರಂದು ಮಂಗಳೂರು, ಸುರತ್ಕಲ್, ಪುತ್ತೂರು, ಪಡುಬಿದ್ರೆ ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಶಿವಧ್ವಜ್ ಶೆಟ್ಟಿ ತಿಳಿಸಿದರು.

ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ತಿಳಿಸಿದ ಅವರು, ತುಳುನಾಡ ಸಂಸ್ಕೃತಿ, ಆಚಾರ ವಿಚಾರ, ನಡೆನುಡಿ, ಜೀವನ ಪದ್ಧತಿಯನ್ನು ಒಳಗೊಂಡ ಕುತೂಹಲಕಾರಿ ಕಥಾ ಹಂದರರೊಂದಿಗೆ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದರು.

ಚಿತ್ರವು ಕಾರ್ಕಳದ ಬೈಲೂರಿನ ಸುತ್ತಮುತ್ತ ಚಿತ್ರೀಕರಣಗೊಂಡಿದ್ದು, ಗುರುಪ್ರಸಾದ್ ಹೆಗ್ಡೆ, ರೂಪಾಶ್ರೀ ವರ್ಕಾಡಿ, ಮೋಹನ್ ಶೇಣಿ, ಬಿಂದು ರಕ್ಷಿದಿ, ಜಿನಪ್ರಸಾದ್, ದಿವ್ಯಶ್ರೀ ನಾಯಕ್, ಲಕ್ಷ್ಮಣ ಕುಮಾರ್ ಮಲ್ಲೂರು, ನಮಿತಾ ಕೂಳೂರು, ಸುಮನ ಮಂಗಳೂರು, ಹರೀಶ್ ಜೋಡುರಸ್ತೆ ಮೊದಲಾದವರು ನಟಿಸಿದ್ದಾರೆ ಎಂದರು.

ತುಳುನಾಡಿನ ಪೂರ್ವಜರ ಬದುಕನ್ನು ಮಾರ್ಮಿಕವಾಗಿ ಕೊರಮ್ಮ ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ತುಳು ಚಿತ್ರವಾದ ಕಾರಣ ಮಂಗಳೂರಿನ ಸುತ್ತಮುತ್ತ ಈ ಚಿತ್ರವನು ಬಿಡುಗಡೆಗೊಳಿಸಲಾಗುತ್ತಿದ್ದು, ಇತರ ರಾಜ್ಯಗಳಲ್ಲಿಯೂ ಚಿತ್ರ ಬಿಡುಗಡೆಗೆ ತಯಾರಿ ನಡೆಸಲಾಗಿದೆ ಎಂದು ಶಿವಧ್ವಜ್ ತಿಳಿಸಿದರು.

ಗೋಷ್ಟಿಯಲ್ಲಿ ಅಡ್ಯಾರು ಮಾಧವ ನಾಯ್ಕಾ, ದೀಪಕ್, ಮೋಹನ್ ಶೇಣಿ, ರೂಪಶ್ರೀ ವರ್ಕಾಡಿ, ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News