×
Ad

ಮಣ್ಣಗುಂಡಿಯಲ್ಲಿ ಮತ್ತೆ ಗುಡ್ಡ ಕುಸಿತ: ಮಂಗಳೂರು-ಬೆಂಗಳೂರು ರಾ.ಹೆ. ಸಂಚಾರ ಸ್ಥಗಿತ

Update: 2025-07-28 12:44 IST

ಕಡಬ,ಜು. 28: ವಿಪರೀತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 75 ರ ಮೇಲೆ ಗುಡ್ಡ ಕುಸಿತಗೊಂಡ ಪರಿಣಾಮ ಬೆಂಗಳೂರು-ಮಂಗಳೂರು ಸಂಚಾರ ಬಂದ್ ಆಗಿರುವ ಘಟನೆ ಮಣ್ಣಗುಂಡಿ ಎಂಬಲ್ಲಿ ನಡೆದಿದೆ.

ರಸ್ತೆಗೆ ರಾಶಿ ರಾಶಿ ಮಣ್ಣು ಹಾಗೂ ಮರ ಬಿದ್ದಿರುವುದರಿಂದ ಸೋಮವಾರ ಬೆಳಗಿನ ಜಾವದಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಣ್ಣು ತೆರವು ಕಾರ್ಯಾಚರಣೆ ಬಳಿಕ ಸದ್ಯ ವಾಹನಗಳು ಸಂಚರಿಸುತ್ತಿವೆ ಎಂದು ತಿಳಿದು ಬಂದಿದೆ.

ಕಳೆದ ವಾರ ಕೂಡ ಅದೇ ಜಾಗದಲ್ಲಿ ಗುಡ್ಡ ಕುಸಿತವಾಗಿದ್ದು, ಸ್ಥಳೀಯರು ಅವೈಜ್ಞಾನಿಕ ಕಾಮಗಾರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News