×
Ad

ಸಂತ ಅಲೋಶಿಯಸ್ ವಿವಿಯಲ್ಲಿ ಕಾನೂನು ಶಿಕ್ಷಣ ಆರಂಭ

Update: 2025-05-15 14:12 IST

 ಮಂಗಳೂರು, ಮೇ 15: ಸಂತ ಅಲೋಶಿಯಸ್ ಪರಿಗಣಿತ ವಿವಿಯ ಸ್ಕೂಲ್ ಆಪ್ ಲಾನಡಿ 2025-26ನೆ ಸಾಲಿನಿಂದ ಕಾನೂನು ಶಿಕ್ಷಣ ಆರಂಭಿಸಲು ಅನುಮೋದನೆ ದೊರಕಿದೆ ಎಂದು ವಿವಿಯ ಕುಲಪತಿ ರೆ.ಡಾ. ಪ್ರವೀಣ್ ಮಾರ್ಟಿಸ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಡ್ವೊಕೇಟ್ಸ್ ಆಕ್ಟ್ ಪ್ರಕಾರ ಅನುಮೋದನೆ ದೊರಕಿದ್ದು, 2025-26 ಮತ್ತು 2026-27ರ ಶೈಕ್ಷಣಿಕ ವರ್ಷಗಳಿಗೆ ಅನುಮೋದಿಸಲಾಗಿದೆ ಎಂದರು.

ಕಾನೂನು ಶಿಕ್ಷಣ ನಿಯಮಗಳು 2008ರ ನಿಯಮಗಳು ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿದ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಶಿಕ್ಷಣ ಒದಗಿಸಲಾಗುವುದು. ಈ ಮೂಲಕ 145 ವರ್ಷಗಳ ಇತಿಹಾಸವಿರುವ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ ಮತ್ತೊಂದು ಮೈಲಿಗಲ್ಲಿನತ್ತ ದಾಪುಗಾಲು ಹಾಕಿದೆ ಎಂದರು.

ಮೂರ ವರ್ಷದ ಎಲ್‌ಎಲ್‌ಬಿ (ಆನರ್ಸ್) ಹಾಗೂ ಐದು ವರ್ಷದ ಇಂಟಿಗ್ರೇಟೆಡ್ ಬಿಬಿಎ ಎಲ್‌ಎಲ್‌ಬಿ (ಆನರ್ಸ್) ಪದವಿಗಳನ್ನು ಒದಗಿಸಲಾಗುತ್ತಿದ್ದು, ಮೂರು ವರ್ಷದ ಎಲ್‌ಎಲ್‌ಬಿಗೆ ಯಾವುದೇ ವಿಷಯದಲ್ಲಿ ಪದವೀಧರರು ಹಾಗೂ ಐದು ವರ್ಷಗಳ ಪದವಿಗೆ ಶೇ. 45 ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಉತ್ತೀರ್ಣರಾದವರು ಅರ್ಹರಾಗಿರುತ್ತಾರೆ. ತಲಾ 60 ವಿದ್ಯಾರ್ಥಿಗಳಿಗೆ ಅವಕಾಶ ದೊರಯಲಿದೆ. ಕಾಲೇಜಿನಲ್ಲಿ ಸೆಂಟ್ರಲ್ ಯುನಿವರ್ಸಿಟಿ ಲೈಬ್ರರಿ, ಹೈ ಸ್ಪೀಡ್ ಇಂಟರ್‌ನೆಟ್, ಹಾಸ್ಟೆಲ್‌ಗಳು, ಆಧುನಿಕ ಕ್ರೀಡಾ ಸೌಲಭ್ಯಗಳು ಹಾಗೂ ಸ್ಮಾರ್ಟ್ ತರಗತಿ ಕೊಠಡಿಗಳಿರುತ್ತವೆ. ಈ ಕೋರ್ಸ್‌ಗಳ ಪಠ್ಯಕ್ರಮಗಳು ಉದ್ಯೋಗ ಸ್ನೇಹಿಯಾಗಿದ್ದು, ಮೌಲ್ಯಾಧಾರಿತ ಮತ್ತು ಅತ್ಯುತ್ತಮ ಕಾನೂನು ಶಿಕ್ಷಣ ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ. ಜಾಗತಿಕ ಗುಣಮಟ್ಟದ ಶಿಕ್ಷಣದ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಲು ಸಂತ ಅಲೋಶಿಯಸ್ ವಿವಿ ಬದ್ಧವಾಗಿದೆ. ಜತೆಗೆ ಮುಂದಿನ ತಲೆಮಾರಿನ ಶ್ರೇಷ್ಟ ಕಾನೂನು ತಜ್ಞರನ್ನು ರೂಪಿಸುವ ಹೊಣೆಗಾರಿಕೆಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.

2025-26ನೆ ಸಾಲಿನ ಕಾನೂನು ಶಿಕ್ಷಣದ ಪ್ರವೇಶ ಪ್ರಕ್ರಿಎಯ ಆರಂಭಗವಾಗಿದ್ದು. ಅರ್ಹ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ವಿವಿಯ ಅಧಿಕೃತ ವೆಬ್‌ಸೈಟ್ www.staloysius.edu.in ಗೆ ಭೇಟಿ ನೀಡಬಹುದು.

ಗೋಷ್ಟಿಯಲ್ಲಿ ಪರಿಗಣಿತ ವಿವಿಯ ಕುಲಸಚಿವ ಡಾ. ರೊನಾಲ್ಡ್ ನಝರೆತ್, ಸ್ವಾಯತ್ತ ಕಾಲೇಜಿನ ಕುಲಸಚಿವ ಡಾ. ಆಲ್ವಿನ್ ಡೇಸಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News