×
Ad

ಎಡಪಂಥೀಯರು, ಹಿಂದೂಯೇತರರಿಂದ ಹಿಂದೂ ಧರ್ಮದ ವಿರುದ್ಧವೇ ಅಪನಂಬಿಕೆ ಸೃಷ್ಟಿ: ಶಾಸಕ ಭರತ್ ಶೆಟ್ಟಿ

Update: 2025-08-07 21:48 IST


ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ನಡೆಸುತ್ತಿದ್ದು, ಈ ನಡುವೆ ಎಡಪಂತಿಯರು, ಹಿಂದೂಯೇತರ ವ್ಯಕ್ತಿಗಳು ಹಿಂದೂ ಧರ್ಮದ ಆಚಾರ ವಿಚಾರಗಳಲ್ಲಿ ಅಪ ನಂಬಿಕೆಯನ್ನು ಸೃಷ್ಟಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ ಎಂದು ಶಾಸಕ ಭರತ್ ಶೆಟ್ಟಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವೊಂದು ಎನ್‌ಜಿಒ ಸಂಘಟನೆಗಳು, ಹಿಂದೂಯೇತರ ವ್ಯಕ್ತಿಗಳು, ಎಡಪಂಥೀಯರು ತನಿಖೆಗೂ ಮುನ್ನವೇ, ಅಪರಾಧ ಪ್ರಕರಣಗಳನ್ನು ತಾವೇ ಕಂಡುಕೊಂಡಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾವೇ ತನಿಖೆ ಮಾಡಿ ವರದಿ ಒಪ್ಪಿಸಿದ ಹಾಗೆ, ಪೋಸ್ಟ್‌ ಗಳನ್ನು ಹಾಕುತ್ತಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಪತ್ತೆಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ನಡುವೆ ಹಿಂದೂ ಧರ್ಮ ಆಚಾರ ವಿಚಾರಗಳನ್ನು ಅವಹೇಳನ ಮಾಡುವುದನ್ನು ಖಂಡಿಸುವುದಾಗಿ ಭರತ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News