×
Ad

ಸುಳ್ಯ| ಲೈನ್ ದುರಸ್ತಿ ವೇಳೆ ವಿದ್ಯುತ್ ತಗುಲಿ ಕಾರ್ಮಿಕ ಸಾವು

Update: 2024-06-17 21:38 IST

ಸುಳ್ಯ: ವಿದ್ಯುತ್ ಕಂಬ ಹತ್ತಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ತಗುಲಿ ಕಾರ್ಮಿಕ ಮೃತಪಟ್ಟ ಘಟನೆ ಸೋಮವಾರ ಸುಳ್ಯ ತಾಲೂಕಿನ ಅಲೆಕ್ಕಾಡಿ ಸಮೀಪದ ಪಾರ್ಲ ಎಂಬಲ್ಲಿ ಸಂಭವಿಸಿದೆ.

ಬೆಳ್ತಂಗಡಿ ತಾಲೂಕಿನ ಕೃಷ್ಣಪ್ಪ ಗೌಡ ಎಂಬವರ ಪುತ್ರ ಪ್ರಕಾಶ (29) ಮೃತರು. ಕಡಬ ಮೂಲಕ ಸಂಸ್ಥೆಯ ವತಿಯಿಂದ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಅಲೆಕ್ಕಾಡಿಯ ಪಾರ್ಲ ಎಂಬಲ್ಲಿ ಕಾರ್ಮಿಕರು ಮೆಸ್ಕಾಂ ಪಂಜ ಸೆಕ್ಷನ್ ವ್ಯಾಪ್ತಿಯ ವಿದ್ಯುತ್ ಲೈನ್ ದುರಸ್ತಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸೋಮವಾರ ಬೆಳಗ್ಗೆ ಘಟನೆ ಸಂಭವಿಸಿದೆ. ಕಂಬ ಹತ್ತಿ ಕೆಲಸ ನಿರ್ವಹಿಸುತ್ತಿದ್ದ ಪ್ರಕಾಶ್ ಕಿರುಚಾಡಿದ್ದು, ಕಾರ್ಮಿಕರು ಬಂದು ನೋಡುವ ವೇಳೆ ಅವರು ಕಂಬದಲ್ಲೇ ಸಿಲುಕಿಕೊಂಡಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದವರು ಕಂಬ ಹತ್ತಿ ಕೆಳಗಿಸಿಳಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಕಾಶ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡ ಹೋದ ವೇಳೆ ಮೃತಪಟ್ಟಿರುವುದು ದೃಢಪಟ್ಟಿದೆ. ವಿದ್ಯುತ್ ಪ್ರವಹಿಸಿ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News