×
Ad

ಲೋಕಸಭಾ ಚುನಾವಣೆ: ಮದ್ರಸಾ ಅಧ್ಯಾಪಕರಿಗೆ ರಜೆ ನೀಡಲು ದ.ಕ. ಜಿಲ್ಲಾ ವಕ್ಫ್ ಅಧ್ಯಕ್ಷ ಸೂಚನೆ

Update: 2024-04-23 12:00 IST

Photo:fb/abdulnasir

ಮಂಗಳೂರು: ಲೋಕಸಭಾ ಚುನಾವಣೆ ನಡೆಯುವ ಏಪ್ರಿಲ್ ‍26 ರಂದು ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಕಾಯ೯ ನಿವ೯ಹಿಸುತ್ತಿರುವ ಖತೀಬರು ಮತ್ತು ಮುಅಝ್ಝಿನ್ ಗಳಿಗೆ ರಜೆ ನೀಡುವಂತೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ. ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಸೂಚಿಸಿದ್ದಾರೆ.

ಈ ಸಂಬಂಧ ಮಸೀದಿ ಆಡಳಿತ ಸಮಿತಿಗಳಿಗೆ ಮನವಿ ಮಾಡಿರುವ ಅವರು, ಎಲ್ಲರೂ ಮತದಾನ ಮಾಡಲು ಚುನಾವಣಾ ಆಯೋಗ ಸಕಲ ಪ್ರಯತ್ನ ಮಾಡುತ್ತಿದೆ. ಮತದಾನ ಪ್ರಜೆಗಳ ಅತ್ಯುನ್ನತ ಹಕ್ಕು ಆಗಿದೆ. ಬಹುತೇಕ ಮಸೀದಿಯ ಖತೀಬರು ಮತ್ತು ಸಿಬ್ಬಂದಿ  ಪರವೂರಿನಲ್ಲಿ ಕತ೯ವ್ಯದಲ್ಲಿರುವುದರಿಂದ ಮತದಾನ ಮಾಡಲು ತಮ್ಮ ಊರಿಗೆ ತೆರಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಸೀದಿಯಲ್ಲಿ ಕತ೯ವ್ಯ ನಿವ೯ಹಿಸುವವರಿಗೆ ಏಪ್ರಿಲ್ 26 ರಂದು ಇಡೀ ದಿನ ರಜೆ ನೀಡುವಂತೆ ಅವರು ತಿಳಿಸಿದ್ದಾರೆ.

ಏಪ್ರಿಲ್ 26 ಶುಕ್ರವಾರ ಆಗಿರುವುದರಿಂದ ಜುಮಾ ನಿವ೯ಹಿಸಲು ಪರಿಸರದಲ್ಲಿ ಇರುವ ಸ್ಥಳೀಯ ಉಸ್ತಾದರ ವ್ಯವಸ್ಥೆ ಮಾಡುವಂತೆ  ಮನವಿ ಮಾಡಿದ್ದಾರೆ. ಅದೇ ರೀತಿ ಭಾನುವಾರ ವಾರದ ರಜೆ ಇರುವ ಮದರಸಗಳ ಮುಅಲ್ಲಿಂಗಳಿಗೂ ಏಪ್ರಿಲ್ 26 ರಂದು ರಜೆ ನೀಡಲು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News