×
Ad

ಮದ್ದಡ್ಕ ಹೆಲ್ಪ್ ಲೈನ್ ವತಿಯಿಂದ ಬೃಹತ್ ಇಫ್ತಾರ್ ಕೂಟ, ಅಭಿನಂದನಾ ಕಾರ್ಯಕ್ರಮ

Update: 2024-04-06 13:55 IST

ಮದ್ದಡ್ಕ : ಮದ್ದಡ್ಕ ಹೆಲ್ಪ್ ಲೈನ್ ಮತ್ತು ಚಾರಿಟೇಬಲ್ ಫೌಂಡೇಶನ್  ವತಿಯಿಂದ ಇಫ್ತಾರ್ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ ನೂರುಲ್‌ ಹುದಾ ಜುಮಾ ಮಸ್ಜಿದ್ ಮದ್ದಡ್ಕ ವಠಾರದಲ್ಲಿ  ಏ.05 ಶುಕ್ರವಾರ ನಡೆಯಿತು.

ಕಾರ್ಯಕ್ರಮವನ್ನು ಮದ್ದಡ್ಕ ಮಸೀದಿಯ ಖತೀಬ್  ಹಸನ್ ಮುಬಾರಕ್ ಸಖಾಫಿ ಉದ್ಘಾಟಿಸಿದರು.  ಮದ್ದಡ್ಕ ಹೆಲ್ಪ್ ಲೈನ್ ಅಧ್ಯಕ್ಷ  ಶಾಕಿರ್ ಚಿಲಿಂಬಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಅಬ್ಬೋನ್ ಮದ್ದಡ್ಕ, ಮಸೀದಿ ಆಡಳಿತ ಸಮಿತಿಯ ಕಾರ್ಯದರ್ಶಿ ಎಮ್ ಸಿರಾಜ್ ಚಿಲಿಂಬಿ, ಸಂಪನ್ಮೂಲ ವ್ಯಕ್ತಿ ಉಮರ್ ಮಾಸ್ಟರ್ ಮಾತನಾಡಿದರು.

ಜಮಾಅತಿನ ಹಿರಿಯರಾದ ಉಮರಬ್ಬ ಯು.ಆರ್, ಎಮ್.ಎಚ್ ಅಬೂಬಕ್ಕರ್, ಎಚ್ ಎಮ್‌ ಹಸನಬ್ಬ, ಮದ್ದಡ್ಕ ಹೆಲ್ಪ್ ಲೈನ್ ಉಪಾಧ್ಯಕ್ಷರಾದ ಝಹೀರ್ ಮದ್ದಡ್ಕ, ಕೋಶಾಧಿಕಾರಿಯಾದ ರಫ಼ೀಕ್ ಲಿಂಬೆ, ಮಾಜಿ ಅಧ್ಯಕ್ಷರಾದ ಝಹೀರ್ ಬಿನಾ ಮತ್ತು ಉಬೈದುಲ್ಲಾ ಯು.ಆರ್, ಕಾರ್ಯಕಾರಿಣಿ ಸದಸ್ಯರಾದ ಸ್ವಾಲಿ ಆಲಂದಿಲ, ಇರ್ಶಾದ್ ಪೋಲಿಸ್ ವೇದಿಕೆಯಲ್ಲಿ ಉಪಸ್ಥಿತಿತರಿದ್ದರು.

ಹೆಲ್ಪ್ ಲೈನ್ ಕಾರ್ಯದರ್ಶಿ ಮುಸ್ತಫಾ ಎಚ್,ಎಸ್ ಸ್ವಾಗತಿಸಿದರು. ಸದಸ್ಯ ಅಲ್ತಾಫ್ ನಿರೂಪಣೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News