×
Ad

ಮದುವೆಯ ಸುಧಾರಣೆಯಲ್ಲಿ ಧರ್ಮ ಗುರುಗಳ ಪಾತ್ರ ಹಿರಿದು: ಇಬ್ರಾಹೀಂ ಸಖಾಫಿ

Update: 2025-12-16 21:01 IST

ಮಂಗಳೂರು: ಮದುವೆ ಎಂಬ ಪವಿತ್ರ ಕಾರ್ಯವನ್ನು ಅನಾಚಾರಗಳು ಹಾಳುಗೆಡಹುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಸುಧಾರಣಾತ್ಮಕ ಹೋರಾಟ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಧರ್ಮ ಗುರುಗಳು ಹೆಚ್ಚಿನ ಪಾತ್ರ ವಹಿಸಬೇಕು ಎಂದು ಖ್ಯಾತ ಮನಶಾಸ್ತ್ರಜ್ಞ ಇಬ್ರಾಹೀಂ ಸಖಾಫಿ ಪುಝಕಾಟಿರಿ ಕರೆ ನೀಡಿದರು. ಸಮಾಜದಲ್ಲಿ ಧರ್ಮಬೋಧನೆಗೆ ಹೆಚ್ಚಿನ ಪ್ರಭಾವವಿದೆ. ಮದುವೆಯ ಸಾಂಪ್ರದಾಯಿಕ ಕರ್ಮಗಳಿಗೆ ಧರ್ಮಗುರುಗಳನ್ನೇ ಅವಲಂಬಿಸಲಾಗುತ್ತದೆ. ಈ ಪ್ರಭಾವವನ್ನು ಬಳಸಿ ವಿವಾಹವನ್ನು ಸರಳಗೊಳಿಸಲು ಮತ್ತು ಅನಾಚಾರ ಮುಕ್ತಗೊಳಿಸಲು ಸಮಾಜವನ್ನು ಪ್ರೇರೇಪಿಸಬೇಕು ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಹಮ್ಮಿಕೊಂಡಿರುವ 'ಮಾದರಿ ಮದುವೆ ಅಭಿಯಾನ'ದ ಅಂಗವಾಗಿ ಎಸ್‌ವೈಎಸ್ ವೆಸ್ಟ್ ಜಿಲ್ಲಾ ವ್ಯಾಪ್ತಿಯ ಖತೀಬ್ ಹಾಗೂ ಇಮಾಮರಿಗಾಗಿ ಪಂಪ್‌ವೆಲ್ ಡಿ.ಕೆ.ಸಿ ಸಭಾಂಗಣದಲ್ಲಿ ನಡೆದ 'ಖುತಬಾ ಸಂಗಮ'ದಲ್ಲಿ ಅವರು ಉಪನ್ಯಾಸ ನೀಡಿದರು.

ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಕ್ ಉದ್ಘಾಟಿಸಿದರು.

ರಾಜ್ಯ ಕಾರ್ಯದರ್ಶಿ ಮುಹಮ್ಮದಲಿ ಸಖಾಫಿ ಅಶ್ಅರಿಯ್ಯಾ, ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುರ್ರಹ್ಮಾನ್ ಸ‌ಅದಿ ಕಂಕನಾಡಿ ಶುಭ ಹಾರೈಸಿದರು.

ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಉಸ್ಮಾನ್ ಸಅದಿ ಪಟ್ಟೋರಿ, ಅಶ್ರಫ್ ಸಅದಿ ಮಲ್ಲೂರು, ಖಲೀಲ್ ಮಾಲಿಕಿ, ಹಸೈನಾರ್ ಆನೆಮಹಲ್ ,ಇಸ್ಹಾಕ್ ಝುಹ್ರಿ ಕಾನಕೆರೆ,ಜಿಲ್ಲಾ ಕೋಶಾಧಿಕಾರಿ ರಝಾಕ್ ಭಾರತ್,ಜಿಲ್ಲಾ ಕ್ಯಾಬಿನೆಟ್ ನಾಯಕರಾದ ಬದ್ರುದ್ದೀನ್ ಅಝ್ಹರಿ,ಯಾಕೂಬ್ ಸಅದಿ ನಾವೂರು,ನಝೀರ್ ಲುಲು,ಫಾರೂಕ್ ಶೇಡಿಗುರಿ,ಮುತ್ತಲಿಬ್ ವೇಣೂರು, ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ, ನವಾಝ್ ಸಖಾಫಿ ಅಡ್ಯಾರ್‌ಪದವು ಧನ್ಯವಾದ ಸಲ್ಲಿಸಿದರು. ತೌಸೀಫ್ ಸಅದಿ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News