×
Ad

ಮಲಬಾರ್ ಗೋಲ್ಡ್ & ಡೈಮಂಡ್ಸ್ ನಿಂದ ʼಮೈನ್ ಡೈಮಂಡ್ ಉತ್ಸವ’

Update: 2023-12-13 20:25 IST

ಮಂಗಳೂರು: ಜಾಗತಿಕ ಮಟ್ಟದ ಆಭರಣ ರೀಟೇಲರ್ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಅತ್ಯುತ್ಕೃಷ್ಟವಾದ ವಜ್ರಾಭರಣಗಳ ʼಮೈನ್ ಡೈಮಂಡ್ ಉತ್ಸವ’ಕ್ಕೆ ಚಾಲನೆ ನೀಡಿದೆ. ಇಲ್ಲಿ ತನ್ನ ಜನಪ್ರಿಯ ಉಪಬ್ರ್ಯಾಂಡ್ ಆಗಿರುವ ಮೈನ್ ಡೈಮಂಡ್ ಆಭರಣಗಳನ್ನು ಪ್ರದರ್ಶನ ಮಾಡುತ್ತಿದೆ. ತನ್ನ ಎಲ್ಲಾ ಸ್ಟೋರ್ ಗಳಲ್ಲಿ ಈ ಉತ್ಸವ ಡಿ. 8 ರಿಂದ ಆರಂಭವಾಗಿದ್ದು, ಜ. 14, 2024 ರವರೆಗೆ ನಡೆಯಲಿದೆ. ಇದಲ್ಲದೇ, ಎನ್ಸಿಆರ್, ಈ ಉತ್ಸವದ ಅಂಗವಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಗ್ರಾಹಕರಿಗೆ ವಜ್ರದ ಮೌಲ್ಯದ ಮೇಲೆ ಶೇ.25 ರವರೆಗೆ ರಿಯಾಯ್ತಿಯನ್ನು ನೀಡಲಿದ್ದು, ಹಳೆಯ ಮೈನ್ ಡೈಮಂಡ್ ಆಭರಣಗಳ ವಿನಿಮಯದ ಮೇಲೆ ಶೇ.100 ರಷ್ಟು ಮೌಲ್ಯವನ್ನು ನೀಡುತ್ತಿದೆ.

ಮೈನ್ ಡೈಮಂಡ್ ಉತ್ಸವದಲ್ಲಿ ಗ್ರಾಹಕರು ವೈವಿಧ್ಯಮಯ ಶ್ರೇಣಿಯಲ್ಲಿನ ಸಾಲಿಟೇರ್, ಪಾರ್ಟಿವೇರ್, ಕ್ಯಾಶ್ಯುವಲ್ ಪಿಕ್ಸ್ ಮತ್ತು ಬ್ರೈಡಲ್ ಆಯ್ಕೆಗಳ ವಜ್ರಾಭರಣಗಳನ್ನು ಖರೀದಿಸಬಹುದಾಗಿದೆ. ನೆಕ್ಪೀಸ್ ಗಳು, ಆಕರ್ಷಕವಾದ ಕಿವಿಯೋಲೆಗಳು, ಡೆಲಿಕೇಟ್ ಸ್ಟಡ್ಸ್ ಮತ್ತು ಉಂಗುರಗಳ ಸಂಗ್ರಹದಲ್ಲಿ ಆಭರಣವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮಲಬಾರ್ ನ ವಿಸ್ತಾರವಾದ ಉತ್ಪನ್ನ ಪೋರ್ಟ್ ಫೋಲಿಯೋವು ಎಲ್ಲಾ ವಯೋಮಾನದವರಿಗೆ ಹೊಂದಿಕೊಳ್ಳುವಂತಹ ಆಭರಣಗಳನ್ನು ಪೂರೈಕೆ ಮಾಡುತ್ತದೆ.

ಈ ಬಗ್ಗೆ ಮಾತನಾಡಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ. ಅಹ್ಮದ್, "ಮಲಬಾರ್ ಗೋಲ್ಡ್ & ಡೈಮಂಡ್ಸ್ ನಲ್ಲಿ ಸಾಲಿಟೇರ್ ಆಭರಣಗಳ ಆಳವಾದ ಅನ್ವೇಷಣೆಯನ್ನು ಕೈಗೊಳ್ಳಲು ನಾವು ಗ್ರಾಹಕರನ್ನುಆಹ್ವಾನಿಸುತ್ತೇವೆ. ಈ ಆಭರಣಗಳು ಸೌಂದರ್ಯ ಮತ್ತು ಮರೆಯಲಾಗದ ನೆನಪುಗಳನ್ನು ಹೆಚ್ಚಿಸುತ್ತವೆ. ಸಾಲಿಟೇರ್ ಉಂಗುರಗಳಲ್ಲಿನ ಆಕರ್ಷಣೆ ಅಚ್ಚಳಿಯದ ನೆನಪುಗಳನ್ನು ತರುತ್ತದೆ. ಇದರಲ್ಲಿನ ಮಿನಿಮಲಿಸ್ಟ್ ಅಲ್ಯೂರ್ ಮತ್ತು ಸೆಂಟ್ರಲ್ ಡೈಮಂಡ್ ನಿಮ್ಮಅಂದವನ್ನು ಹೆಚ್ಚಿಸುತ್ತದೆ. ನಮ್ಮ `ಮೈನ್ ಎಕ್ಸ್ಕ್ಲೂಸಿವ್ ಗಳು’ ವಿಶಿಷ್ಟವಾದ ವಜ್ರದ ಆಭರಣಗಳನ್ನು ಪ್ರತಿ ಸಂದರ್ಭದಲ್ಲೂಆಕರ್ಷಣೆಯನ್ನು ಹೆಚ್ಚು ಮಾಡುವಂತಿವೆ’’ ಎಂದರು.

ಮಲಬಾರ್ ಗೋಲ್ಡ್ & ಡೈಮಂಡ್ಸ್ ವಿಶ್ವಾಸಾರ್ಹತೆ, ಪಾರದರ್ಶಕತೆ, ಪ್ರಮಾಣೀಕೃತ ಮತ್ತು ಜವಾಬ್ದಾರಿಯುತ ಮೂಲಗಳ ವಜ್ರಗಳ ಗುಣಮಟ್ಟ ನೀಡುವಲ್ಲಿ ಬದ್ಧವಾಗಿದೆ. 28 ಗುಣಮಟ್ಟ ಪರೀಕ್ಷೆಗಳ ಮೂಲಕ ಬ್ರ್ಯಾಂಡ್ ಅತ್ಯುತ್ಕೃಷ್ಟವಾದ ಆಭರಣಗಳನ್ನು ಖಚಿತಪಡಿಸುತ್ತದೆ. 28 ಹಂತದ ಗುಣಮಟ್ಟ ಪರೀಕ್ಷೆಯ ನಂತರ ಪ್ರತಿಯೊಂದು ಆಭರಣಗಳಿಗೂ GIA ಮತ್ತು IGI ಪ್ರಮಾಣಪತ್ರಗಳನ್ನು ಪಡೆಯಲಾಗುತ್ತದೆ. ಈ ಮೂಲಕ ಶುದ್ಧತೆ ಮತ್ತುಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಮಲಬಾರ್ ಸಂಸ್ಥೆಯು ಆಭರಣಗಳಿಗೆ ಜೀವನಪರ್ಯಂತ ನಿರ್ವಹಣೆ, ಒಂದು ವರ್ಷದವರೆಗೆ ಉಚಿತ ವಿಮೆ ಮತ್ತು ಬೈ-ಬ್ಯಾಕ್ ಗ್ಯಾರಂಟಿಯಂತಹ ಮೌಲ್ಯವರ್ಧಿತ ಸೇವೆಗಳನ್ನು ನೀಡುತ್ತದೆ. ಆಭರಣದ ಒಟ್ಟುತೂಕ, ಹರಳಿನ ತೂಕ ಮತ್ತು ತಯಾರಿಕೆ ದರ ಸೇರಿದಂತೆ ಒಟ್ಟಾರೆ ಆಭರಣದ ಬೆಲೆಯ ಪಟ್ಟಿಯನ್ನು ಪ್ರತಿಯೊಂದು ಆಭರಣವೂ ಒಳಗೊಂಡಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News