ಮಲಾರ್: ಕೊಳತ್ತಮಜಲು ಅಬ್ದುಲ್ ರಹ್ಮಾನ್ ಹತ್ಯೆ ಖಂಡಿಸಿ ಪ್ರತಿಭಟನೆ
Update: 2025-05-31 14:41 IST
ಕೊಣಾಜೆ: ಅಲ್ ಮುಬಾರಕ್ ಜುಮ್ಮಾ ಮಸ್ಜಿದ್ ಅರಸ್ತಾನ, ಮಲಾರ್ ನಲ್ಲಿ ಜುಮಾ ನಮಾಝಿನ ಬಳಿಕ ಕೊಳತ್ತಮಜಲು ಅಬ್ದುಲ್ ರಹ್ಮಾನ್ ಅವರ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಯಿತು.
ಸ್ಥಳೀಯ ಖತೀಬರಾದ ಮುಹಮ್ಮದ್ ಶಫೀಕ್ ಕೌಸರಿ ಉಸ್ತಾದರು ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಸದರ್ ಮುಅಲ್ಲಿಂ ರಾದ ಶಹೀರ್ ಕೌಸರಿ ಉಸ್ತಾದ್, ಮುಅಝ್ಝಿನ್ ರಾದ ಅಬ್ದುಲ್ ಜಬ್ಬಾರ್ ಯಮಾನಿ ಉಸ್ತಾದ್ ಹಾಗೂ ಜಮಾಅತ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಜಮಾಅತಿನ ಹಿರಿಯರು, ಕಿರಿಯರು ಉಪಸ್ಥಿತರಿದ್ದರು