×
Ad

ಮಲೇಷ್ಯಾ ಸ್ಪೀಕರ್ ಜೋಹರಿ ಬಿನ್ ಅಬ್ದುಲ್ - ಯು.ಟಿ.ಖಾದರ್ ಭೇಟಿ

Update: 2025-06-17 17:14 IST

ಮಂಗಳೂರು: ಮಲೇಷ್ಯಾ ಪ್ರವಾಸದಲ್ಲಿರುವ ಕರ್ನಾಟಕದ ಸ್ಪೀಕರ್ ಯು.ಟಿ. ಖಾದರ್ ಅವರು ಮಲೇಷ್ಯಾ ಜನ ಪ್ರತಿನಿಧಿಗಳ ಸಭೆಯ ಸ್ಪೀಕರ್ (Speaker Of Dewan Rakyat) ವೈ.ಬಿ ತಾನ್ ಶ್ರೀ ದಾತೋ ಡಾ. ಜೋಹರಿ ಬಿನ್ ಅಬ್ದುಲ್ ಅವರನ್ನು ಮಲೇಷ್ಯಾ ಪಾರ್ಲಿಮೆಂಟ್ ಹೌಸ್ ನಲ್ಲಿ ಭೇಟಿಯಾಗಿ ಪ್ರಜಾ ಪ್ರಭುತ್ವದ ಪ್ರಸಕ್ತ ರಾಜಕೀಯ ಸನ್ನಿವೇಶಗಳ ಕುರಿತು ಚರ್ಚೆ ನಡೆಸಿದರು.

ಮುಂದಿನ ದಿನಗಳಲ್ಲಿ ಮಲೇಷ್ಯಾ ಜನ ಪ್ರತಿನಿಧಿಗಳು ಹಾಗೂ ಕರ್ನಾಟಕ ಶಾಸಕರ ಮದ್ಯೆ ಎರಡು ದೇಶಗಳ ಪ್ರಜಾ ಪ್ರಭುತ್ವ, ಸಂಸದೀಯ ವ್ಯವಹಾರಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News