×
Ad

ಮಂಗಳೂರು : ದ್ವಿಚಕ್ರ ವಾಹನ ಸವಾರನಿಗೆ ಕಚ್ಚಿದ ಸೀಟ್ ಒಳಗೆ ಅಡಗಿ ಕುಳಿತಿದ್ದ ಹಾವು

Update: 2024-09-30 20:06 IST

ಕುಪ್ಪೆಪದವು: ದ್ವಿಚಕ್ರ ವಾಹನದ ಸೀಟ್ ಒಳಗೆ ಅಡಗಿ ಕುಳಿತಿದ್ದ ಕನ್ನಡಿ ಹಾವು ವಾಹನ ಸವಾರನಿಗೆ ಕಚ್ಚಿದ ಘಟನೆ ಕುಪ್ಪೆಪದವಿನಲ್ಲಿ ಶುಕ್ರವಾರ ರಾತ್ರಿ ನಡೆದಿದ್ದು, ಪ್ರಕರಣ ತಡವಾಗಿದ ಬೆಳಕಿಗೆ ಬಂದಿದೆ.

ಕುಪ್ಪೆಪದವಿನ ಇಮ್ತಿಯಾಜ್ ಹಾವು ಕಡಿತಕ್ಕೊಳಗಾದವರು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇಮ್ತಿಯಾಝ್‌ ಅವರು ಶುಕ್ರವಾರ ರಾತ್ರಿ ಮಸೀದಿಗೆ ಹೋಗಲೆಂದು ತನ್ನ ಇಲೆಕ್ಟ್ರಿಕ್‌ ದ್ವಿಚಕ್ರ ವಾಹನದ ಸೀಟು ತೆರೆದು ವಾಹನದ ಕಾಗದ ಪತ್ರ ಇಡುತ್ತಿದ್ದ ವೇಳೆ ಅವರ ಕೈ ಬೆರಳಿಗೆ ಹಾವು ಕಚ್ಚಿದೆ. ತಕ್ಷಣ ಮನೆ ಮಂದಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News