×
Ad

ಹಣ ದ್ವಿಗುಣ ಆಮಿಷಕ್ಕೆ ಮೋಸ ಹೋದ ವ್ಯಕ್ತಿ: ಪ್ರಕರಣ ದಾಖಲು

Update: 2025-08-22 23:16 IST

ಮಂಗಳೂರು, ಆ.22: ಹಣ ಹೂಡಿಕೆ ಮಾಡಿದರೆ ದ್ವಿಗುಣ ಮಾಡಿಕೊಡುವುದಾಗಿ ಟೆಲಿಗ್ರಾಂನಲ್ಲಿ ಅಪರಿಚಿತರು ಹೇಳಿದ ಮಾತನ್ನು ನಂಬಿದ ವ್ಯಕ್ತಿಯೊಬ್ಬರು 95 ಸಾವಿರ ರೂ. ಕಳೆದುಕೊಂಡ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.20ರಂದು ಅನು ಕ್ವೀನ್ ಹೆಸರಿನ ಮಹಿಳೆಯು ಟೆಲಿಗ್ರಾಂ ಚಾನಲ್‌ನಲ್ಲಿ ತನಗೆ ಪರಿಚಯವಾಗಿದ್ದರು. ಹಣ ಹೂಡಿಕೆ ಮಾಡಿದರೆ ದ್ವಿಗುಣ ಮಾಡಿಕೊಡುವುದಾಗಿ ಆಕೆ ತಿಳಿಸಿದ್ದಳು. ಅದರಂತೆ ಆಕೆ ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿದಾಗ ಟೆಲಿಗ್ರಾಂ ಗ್ರೂಪ್ ಒಂದಕ್ಕೆ ತನ್ನನ್ನು ಸೇರಿಸಲಾಯಿತು. ಬಳಿಕ ಯುನಿಕ್‌ಲೋ ಎನ್ನುವ ವೆಬ್‌ಸೈಟ್ ತೆರೆದುಕೊಂಡಿದ್ದು, ಅದರ ಮೂಲಕ ಕ್ಲೈಂಟ್ ಸಪೋರ್ಟ್ ಎನ್ನುವ ಗುಂಪಿಗೆ ಜಾಯಿನ್ ಆದೆ. ನಂತರ ಅವರು ಹೇಳಿದಂತೆ ತಾನು 10 ಸಾವಿರ ರೂ.ವನ್ನು ಹೂಡಿಕೆ ಮಾಡಿದ್ದೆ. ಆವಾಗ ನಿಮ್ಮ ಲಿಮಿಟ್ 30 ಸಾವಿರ ರೂ. ಎಂದು ಅಪರಿಚಿತರು ಹೇಳಿದ ಮೇರೆಗೆ ಮತ್ತೆ 20 ಸಾವಿರ ರೂ. ಹೂಡಿಕೆ ಮಾಡಿದ್ದೆ. ನಂತರ ನೀವು ಹೂಡಿಕೆ ಮಾಡಿರುವ ಹಣ ಕಡಿಮೆಯಾಗಿದ್ದು, 63,556 ರೂ. ಹೂಡಿಕೆ ಮಾಡಿ ಎಂದು ತಿಳಿಸಿದ್ದರು. ಅದರಂತೆ ತಾನು 40 ಸಾವಿರ ರೂ. ಮತ್ತು 25 ಸಾವಿರ ರೂ. ಹೀಗೆ ಒಟ್ಟು 95 ಸಾವಿರ ರೂ. ಹೂಡಿಕೆ ಮಾಡಿದ್ದೆ. ಬಳಿಕ 1.67 ಲಕ್ಷ ರೂ. ಹಣ ಹಾಕಲು ಹೇಳಿದಾಗ ತನಗೆ ಸಂಶಯ ಬಂದಿದೆ. ತಕ್ಷಣ ಹಣ ಕಳಕೊಂಡ ವ್ಯಕ್ತಿಯು 1930 ಸೈಬರ್ ಸಹಾಯವಾಣಿಗೆ ದೂರು ನೀಡಿದ್ದು, ಬಳಿಕ ವಂಚಿಸಿದ ಅನು ಕ್ವೀನ್ ಮತ್ತು ಗ್ರೂಪ್ ಅಡ್ಮಿನ್‌ಗಳ ವಿರುದ್ಧ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News