×
Ad

ಮೀಲಾದ್ ಪ್ರಯುಕ್ತ ‘ಮನಾರ’ಕಲಾ ಸಾಂಸ್ಕೃತಿಕ ಕಾರ್ಯಕ್ರಮ

Update: 2023-10-16 18:47 IST

ಉಪ್ಪಿನಂಗಡಿ, ಅ.16: ಕ್ಷಣ ಕ್ಷಣವೂ ಜಗತ್ತು ಬದಲಾವಣೆಯತ್ತ ದಾಪುಗಾಲು ಹಾಕುತ್ತಿದೆ. ಸಮಾಜವು ಈ ಬದಲಾವಣೆ ಯನ್ನು ಅರ್ಥ ಮಾಡಿಕೊಂಡು ವಿನೂತನ ಆವಿಷ್ಕಾರಗಳ ಮೂಲಕ ಬದಲಾವಣೆಗೆ ಒಡ್ಡಿಕೊಂಡು ಸಮಾಜವನ್ನು ರಕ್ಷಿಸಿ ಕೊಳ್ಳಬೆಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದು ಕೆಮ್ಮಾರ ಶಂಸುಲ್ ಉಲಮಾ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎಸ್‌ಬಿ ದಾರಿಮಿ ಅಭಿಪ್ರಾಯಪಟ್ಟಿದ್ದಾರೆ.

ಕೆಮ್ಮಾರ ಶಕ್ತಿ ನಗರದ ವುಮೆನ್ಸ್ ಶರೀಅತ್ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಮೀಲಾದ್ ಪ್ರಯುಕ್ತ ಸೋಮವಾರ ನಡೆದ ‘ಮನಾರ’ ಕಲಾ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.

ಹಿಂದಿನ ಕಾಲದಲ್ಲಿ ಮುಸ್ಲಿಂ ಮಹಿಳೆಯರು ಅಡುಗೆ ಕೋಣೆಗೆ ಸೀಮಿತವಾಗಿದ್ದರು. ಆದರೆ ಇಂದು ‘ಸಮಸ್ತ’ದ ಉಲಮಾ ಗಳ ಕಾರ್ಯವೈಖರಿಯಿಂದಾಗಿ ಮುಸ್ಲಿಂ ಮಹಿಳೆಯರು ಕೂಡಾ ವೈದ್ಯಕೀಯ, ಶೈಕ್ಷಣಿಕ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದು ಮುಂದಿನ ತಲೆಮಾರನ್ನೂ ವಿದ್ಯಾವಂತರನ್ನಾಗಿಸುವಲ್ಲಿ ಸಫಲರಾಗುತ್ತಿದ್ದಾರೆ. ಮುಸ್ಲಿಮರು ಕಾಲದ ಕರೆಯನ್ನು ಸ್ವೀಕರಿಸುವುದಿಲ್ಲ ಎನ್ನುವವರಿಗೆ ಇದು ತಕ್ಕ ಉತ್ತರವೂ ಆಗಿದೆ ಎಂದು ಎಸ್‌ಬಿ ದಾರಿಮಿ ನುಡಿದರು.

ಪೆರಿಯಡ್ಕ ಖತೀಬ್ ಅಬ್ದುಲ್ ರಹಿಮಾನ್ ಪೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್‌ನ ಸದಸ್ಯರಾದ ಉಮರ್ ಹಾಜಿ ಕೋಡಿಯಾಡಿ, ಬಶೀರ್ ಹಾಜಿ ದಾರಂದಕುಕ್ಕು, ಹಸೈನಾರ್ ಹಾಜಿ ಕೊಯಿಲ, ರಶೀದ್ ಹಾಜಿ ಪರ್ಲಡ್ಕ, ಇಸಾಕ್ ಕೆಮ್ಮಾರ, ಅಬ್ದುಲ್ಲ ಉಸ್ತಾದ್ ಕೆಮ್ಮಾರ, ಇಬ್ರಾಹಿಂ ಬಡಿಲ, ಯುನಿಕ್ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು. ಕೆಎಂಎ ಕೊಡುಂಗೈ ಸ್ವಾಗತಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News