×
Ad

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

Update: 2023-07-31 18:07 IST

ಮಂಗಳೂರು, ಜು.31: ನಗರದ ಬೋಳೂರು ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೂರು ಮಂದಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ನಗರದ ಬಂದರ್ ರಸ್ತೆಯ ಗಣೇಶ್ (28), ಡೊಂಗರಕೇರಿಯ ರಾಹುಲ್ ಗಟ್ಟಿ (25), ಕುದ್ರೋಳಿಯ ಅಭಿಲಾಶ್ ಎಸ್. ಕರ್ಕೇರಾ (27) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ 2.133 ಕೆಜಿ ಗಾಂಜಾ, ಗಾಂಜಾ ಮಾರಾಟ ಮಾಡಲು ಬಳಸಿದ್ದ ರಿಕ್ಷಾ ಮತ್ತು ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News