ಮಂಗಳೂರು | BITಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅಸೋಸಿಯೇಷನ್ ಉದ್ಘಾಟನೆ
ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT) ಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗವು BIT IEEE ವಿದ್ಯಾರ್ಥಿ ಶಾಖೆಯ ಸಹಯೋಗದೊಂದಿಗೆ ನ. 26 ರಂದು ಅಂತರರಾಷ್ಟ್ರೀಯ ಸೆಮಿನಾರ್ ಹಾಲ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅಸೋಸಿಯೇಷನ್ – CEABIT ಅನ್ನು ಉದ್ಘಾಟಿಸಲಾಯಿತು.
ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ತಾಂತ್ರಿಕ ಸಾಮರ್ಥ್ಯವನ್ನು ವಿಸ್ತರಿಸುವತ್ತ ಹಾಗೂ ನೂತನ ಚಟುವಟಿಕೆಗಳಿಗೆ ವೇದಿಕೆ ಒದಗಿಸಲು ಇದು ಮಹತ್ವದ ಹೆಜ್ಜೆಯಾಗಿದೆ.
ಪ್ರೊ. ಮುಹಮ್ಮದ್ ಸಿನಾನ್ ಮತ್ತು CSE ವಿಭಾಗದ ಮುಖ್ಯಸ್ಥ ಡಾ. ಅಝೀಝ್ ಮುಸ್ತಫಾ ಅವರು CEABITಯ ಲೋಗೋವನ್ನು ಅನಾವರಣಗೊಳಿಸಿದರು.
ಡಾ. ಅಝೀಝ್ ಮುಸ್ತಫಾ ಅವರು ಮಾತನಾಡಿ CEABITಯ ಉದ್ದೇಶ, ದೃಷ್ಟಿಕೋನ ಮತ್ತು ವಿಭಾಗದೊಳಗಿನ ಸಂಶೋಧನೆ–ಸಹಕಾರದ ಸಂಸ್ಕೃತಿಯ ಅಗತ್ಯತೆಯನ್ನು ವಿವರಿಸಿದರು.
ಕಾರ್ಯಕ್ರಮದ ಮತ್ತೊಂದು ಮುಖ್ಯ ಆಕರ್ಷಣೆಯಾದ BIT ಮತ್ತು E26 ಮೀಡಿಯಾ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ನಡುವಿನ ಅಧಿಕೃತ MoU ಗೆ ಡಾ. ಅಝೀಝ್ ಮುಸ್ತಫಾ ಮತ್ತು ಕಂಪೆನಿಯ ಸಿಇಒ ಮುಹಮ್ಮದ್ ಹಝೀಮ್ ಶೈಮ್ ಸಹಿ ಹಾಕಿದರು.
ತಾಂತ್ರಿಕ ಕಾರ್ಯಾಗಾರದಲ್ಲಿ ಮುಹಮ್ಮದ್ ಹಝೀಮ್ ಶೈಮ್ ಮತ್ತು ಇಬ್ರಾಹಿಂ ಖಲೀಲ್ ಅವರು ಕೃತಕ ಬುದ್ಧಿಮತ್ತೆ(AI), ಪ್ರಾಂಪ್ಟ್ ಇಂಜಿನಿಯರಿಂಗ್ ಮತ್ತು ಯಾಂತ್ರೀಕರಣದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಒದಗಿಸಿದರು. ಕ್ವಿಝ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು. ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮವನ್ನು CSE ವಿದ್ಯಾರ್ಥಿಗಳಾದ ಫಾತಿಮತ್ ರಂಝೀನಾ ನಿರೂಪಿಸಿದರು. ಮುಹಮ್ಮದ್ ಇಫಾಝ್ ಸ್ವಾಗತ ಭಾಷಣ ಮಾಡಿದರು. ಹಲೀಮಾ ಶಮ್ನಾಝ್ ವಂದಿಸಿ, ಭಾಗವಹಿಸಿದ ಎಲ್ಲ ಗಣ್ಯರು, ಉಪನ್ಯಾಸಕರು, ಸಂಘಟಕರು ಮತ್ತು ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.