×
Ad

ಮಂಗಳೂರು | ತಾಂತ್ರಿಕ ದೋಷದಿಂದ ಮುಳುಗಿದ ಮೀನುಗಾರಿಕಾ ಬೋಟ್ : ದೂರು

Update: 2025-12-13 18:43 IST

ಮಂಗಳೂರು,ಡಿ.13:ಮೀನುಗಾರಿಕೆಗೆ ತೆರಳಿದ್ದ ಬೋಟ್ ತಾಂತ್ರಿಕ ದೋಷದಿಂದ ಮುಳುಗಿ ಅಪಾರ ನಷ್ಟ ಉಂಟಾಗಿದೆ ಎಂದು ನಗರದ ಕಂಕನಾಡಿಯ ಮುಹಮ್ಮದ್ ಫಾರೂಕ್ ಅವರು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು ಮತ್ತು ಕರಾವಳಿ ಕಾವಲು ಪೊಲೀಸ್ ಘಟಕಕ್ಕೆ ದೂರು ನೀಡಿದ್ದಾರೆ.

ತನ್ನ ಮಗಳು ಫಾತಿಮಾ ಶಾಫಾ ಮಾಲಕತ್ವದ ಮಶ್ರಿಕ್‌ ಎಂಬ ಹೆಸರಿನ ಬೋಟ್ ಡಿ.10ರ ಮುಂಜಾನೆ 4:30ಕ್ಕೆ ಬಂದರ್ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿತ್ತು. ಅದರಲ್ಲಿ ಒಟ್ಟು 7 ಮಂದಿ ಮೀನುಗಾರರು ಇದ್ದರು. ಸುರತ್ಕಲ್-ಕಾಪು ಕರಾವಳಿ ತೀರದಿಂದ ಸುಮಾರು 12 ನಾಟಿಕಲ್ ಮೈಲ್ ಉತ್ತರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಅಂದರೆ ಡಿ.10ರ ಸಂಜೆ 6:15ಕ್ಕೆ ಬೋಟಿನ ಇಂಜಿನ್ ಕಡೆಯಿಂದ ಬೆಂಕಿ ಕಾಣಿಸಿಕೊಂಡಿತು. ಬೋಟಿನಲ್ಲಿದ್ದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಆಗಲಿಲ್ಲ. ತಕ್ಷಣ ಸಮೀಪದಲ್ಲೇ ಇದ್ದ ಮಿಝಾನ್‌ ಎಂಬ ಹೆಸರಿನ ಬೋಟಿನವರಿಗೆ ಮಾಹಿತಿ ನೀಡಿದ್ದು, ಅವರ ಸಹಾಯದಿಂದ ಮಶ್ರಿಕ್ ಬೋಟಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿ ಆಕಸ್ಮಿಕದಿಂದ ಬೋಟ್ ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು 1 ಕೋ.ರೂ. ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News