×
Ad

ಮಂಗಳೂರು| ಸೈಬರ್ ವಂಚನೆ ಪ್ರಕರಣ: ಆರೋಪಿ ದೆಹಲಿ ಮೂಲದ ಗೌರವ್ ಮಕ್ವಾನ್ ಸೆರೆ

Update: 2024-12-06 17:58 IST

ಗೌರವ್ ಮಕ್ವಾನ್

ಮಂಗಳೂರು, ಡಿ.6: ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಸೈಬರ್ ಇಕೋನಾಮಿಕ್ ನಾರ್ಕೋಟಿಕ್ ಕ್ರೈಂ (ಸೆನ್) ಪೊಲೀಸರು ದೆಹಲಿ ಮೂಲದ ಗೌರವ್ ಮಕ್ವಾನ್ (25) ಎಂಬಾತನನ್ನು ಬಂಧಿಸಿದ್ದಾರೆ.

ಯದುನಂದನ್ ಎಂಬವರ ವಾಟ್ಸ್‌ಆ್ಯಪ್‌ಗೆ ಬಂದ ಸಂದೇಶದಂತೆ ಅವರು ಆ್ಯಪ್ ಡೌನ್‌ಲೋಡ್ ಮಾಡುತ್ತಿದ್ದಂತೆ ಪ್ಲಿಪ್‌ಕಾರ್ಟ್ ಖಾತೆ ಹ್ಯಾಕ್ ಆಗಿತ್ತು. ಸೈಬರ್ ವಂಚಕರು ಯದುನಂದರ ಪ್ಲಿಪ್‌ಕಾರ್ಟ್ ಖಾತೆಯನ್ನು ಬಳಸಿಕೊಂಡು 1,31,000 ರೂ.ಮೌಲ್ಯದ ಎರಡು ಮೊಬೈಲ್ ಫೋನ್ ಹಾಗೂ ಗಿಫ್ಟ್ ವೋಚರ್‌ಗಳನ್ನು ಖರೀದಿಸಿದ್ದರು. ಈ ಬಗ್ಗೆ ಯದುನಂದನ್ ಸೆನ್ ಠಾಣೆಗೆ ದೂರು ನೀಡಿದ್ದರು. ‌

ಅದರಂತೆ ಕಾರ್ಯಾಚರಣೆ ನಡೆಸಿದ ಎಎಸ್ಸೈ ಗುರಪ್ಪಕಾಂತಿ, ಪೊಲೀಸ್ ಕಾನ್‌ಸ್ಟೇಬಲ್ ತಿಪ್ಪಾರೆಡ್ಡಿ ದೆಹಲಿಯ ಗೌರವ್ ಮಕ್ವಾನ್ ನನ್ನು ಬಂಧಿಸಿದ್ದಾರೆ. ಅಲ್ಲದೆ ಆರೋಪಿಯಿಂದ ಅಂಡ್ರಾಯ್ಡ್ ಪೋನ್, ಐಪೋನ್, ಏರ್‌ಪ್ಯಾಡ್, ಆರೋಪಿಯು ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಸಹಿತ 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News