×
Ad

ಮಂಗಳೂರು: ಮನೆಯ ಸಾಮಗ್ರಿಗಳಿಗೆ ಹಾನಿ; ದೂರು ದಾಖಲು

Update: 2023-09-29 20:18 IST

ಮಂಗಳೂರು, ಸೆ.29: ನಗರದ ಬೋಳೂರಿನ ಹಿಂದೂಸ್ಥಾನ್ ಫ್ಯಾಕ್ಟರಿ ಬಳಿಯಿರುವ ಮನೆಯೊಂದಕ್ಕೆ ಸೆ.28ರ ಸಂಜೆ 6ರಿಂದ 7ರ ಮಧ್ಯೆ ದುಷ್ಕರ್ಮಿಗಳು ನುಗ್ಗಿ ಮನೆಯೊಳಗಿನ ಸಾಮಗ್ರಿಗಳಿಗೆ ಹಾನಿಗೈದಿರುವುದಾಗಿ ಮನೆ ಮಾಲಕ ರತ್ನಾಕರ ಪುತ್ರನ್ ಎಂಬವರು ಬರ್ಕೆ ಠಾಣೆಗೆ ದೂರು ನೀಡಿದ್ದಾರೆ.

ತನ್ನ ಮನೆಯಲ್ಲಿ ನೀರಿನ ಸಮಸ್ಯೆ ಇರುವುದರಿಂದ ಅಶೋಕ ನಗರದಲ್ಲಿರುವ ತನ್ನ ಮಗಳ ಮನೆಯಲ್ಲಿ ಸುಮಾರು 11 ತಿಂಗಳಿಂದ ವಾಸ್ತವ್ಯವಿದ್ದು, ದಿನನಿತ್ಯ ಮನೆಯನ್ನು ಸ್ವಚ್ಚಗೊಳಿಸಿ ಬೀಗ ಹಾಕಿಕೊಂಡು ಹೋಗುತ್ತಿರುವೆ. ಸೆ.28ರಂದು ಸಂಜೆ 6ರಿಂದ 7ರ ಮಧ್ಯೆ ಯಾರೋ ಮನೆಯ ಬಾಗಿಲಿನ ಬೀಗ ಒಡೆದು ಮನೆಯ ಒಳಗೆ ಪ್ರವೇಶಿಸಿ ಟಿ.ವಿ., ಗಡಿಯಾರ, ಗಾಜಿನ ಗ್ಲಾಸ್‌ಗಳನ್ನು ಹುಡಿ ಮಾಡಿ, ಸುಮಾರು 30,000 ರೂ. ನಷ್ಟ ಉಂಟು ಮಾಡಿರುತ್ತಾರೆ ರತ್ನಾಕರ ಪುತ್ರನ್ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News