×
Ad

ಮಂಗಳೂರು: ವ್ರಾಫಾಫೆಲ್ಲಾ ಔಟ್ಲೆಟ್ ಸಂಸ್ಥೆಗೆ ವಂಚನೆ; ದೂರು

Update: 2023-09-30 23:41 IST

ಮಂಗಳೂರು: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳೂರು ಪ್ರಾದೇಶಿಕ ವಿಭಾಗ ವ್ರಾಫಾಫೆಲ್ಲಾ ಔಟ್ಲೆಟ್( Wrapafella Outlet )ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ವ್ಯಕ್ತಿಯೊಬ್ಬರು ಸಂಸ್ಥೆಗೆ ಲಕ್ಷಾಂತರ ರೂಪಾಯಿ ವಂಚಿಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಆಕಾಶ್ ಪಾಂಡೆ ಎಂಬಾತನು ವ್ರಾಫಾಫೆಲ್ಲಾ ಔಟ್ಲೆಟ್‌ನಲ್ಲಿ ಅಸಿಸ್ಟಂಟ್ ಮ್ಯಾನೆಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಹಣಕಾಸು ಮತ್ತು ಇತರ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಆಗಸ್ಟ್ ತಿಂಗಳಿನಲ್ಲಿ ಸಂಗ್ರಹವಾದ ಹಣದಲ್ಲಿ 56,000 ರೂಪಾಯಿ ಹಾಗೂ ಸೆ. 1ರಿಂದ 6ರವರೆಗೆ ಕಂಪನಿ ಕ್ಯಾಶ್ ಸೇಲ್ಸ್ ನಲ್ಲಿ ಸಂಗ್ರಹವಾದ 62690 ರೂಪಾಯಿ ಹಣವನ್ನು ಕೂಡ ಕಂಪನಿ ಅಂಕೌಂಟ್‌ಗೆ ಜಮಾ ಮಾಡದೆ ಒಟ್ಟು 1,18,690 ರೂಪಾಯಿ ಹಣವನ್ನು ವಂಚನೆ ಮಾಡಿರುವುದಾಗಿ ಆರೋಪಿಸಿ ಬಜ್ಪೆ ಪೊಲೀಸರಿಗೆ ದೂರು ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News