×
Ad

ಮಂಗಳೂರು: ಗಾಂಜಾ ಮಾರಾಟ ಪ್ರಕರಣ; ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ

Update: 2023-12-30 23:18 IST

ಮಂಗಳೂರು: ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರು 6ನೇ ಜೆಎಂಎಫ್‌ಸಿ ನ್ಯಾಯಾಲಯ ಶನಿವಾರ ಶಿಕ್ಷೆ ವಿಧಿಸಿ ತೀರ್ಪು‌ ನೀಡಿದೆ‌.

ಆರೋಪಿತರಾದ ಬೊಕ್ಕಪಟ್ಣದ ಮೋನಿಶ್ ಮತ್ತು ಕೋಡಿಕಲ್‌‌ನ ಅಖಿಲ್‌ಗೆ ನ್ಯಾಯಾಧೀಶೆ ಪೂಜಾಶ್ರೀ ಒಂದು ತಿಂಗಳ ಸಜೆ ಹಾಗೂ 1000 ರೂ. ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.

ಸರಕಾರಿ ಅಭಿಯೋಜಕ ಜನಾರ್ಧನ್ ವಾದ ಮಂಡಿಸಿದ್ದಾರೆ. ಆರೋಪಿತರು ಸುಲ್ತಾನ್ ಬತ್ತೇರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಂದಿನ ಎಸ್ಸೈ ಹಾರೂನ್ ಅಕ್ತರ್ 2021ರ ಎಪ್ರಿಲ್ 17ರಂದು ದಾಳಿ ನಡೆಸಿ ಆರೋಪಿತರಿಂದ 500 ಗ್ರಾಂ ಗಾಂಜಾ ವಶಪಡಿಸಿ ಕೊಂಡು ತನಿಖೆ ಮಾಡಿದ್ದರು. ಬಳಿಕ ಎಸ್ಸೈ ಶೋಭಾ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News