×
Ad

ಮಂಗಳೂರು: ಬಳ್ಳಾಲ್ ಬಾಗ್‌ನಲ್ಲಿ ಇಂದಿರಾ ಸೇವಾ ಕೇಂದ್ರ ಆರಂಭ

Update: 2023-08-08 19:36 IST

ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾನವ ಹಕ್ಕುಗಳ ಘಟಕ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ವಾರ್ಡ್ ನಂಬರ್ 28 ಮತ್ತು 29 ಸಮಿತಿ ಸಹಕಾರದೊಂದಿಗೆ ಬಳ್ಳಾಲ್ ಬಾಗ್‌ನ ಸಿಎಂಸಿ ಬಿಲ್ಡಿಂಗ್‌ನ ತಳ ಅಂತಸ್ತಿನಲ್ಲಿ ಆರಂಭಗೊಂಡ ನೂತನ ಇಂದಿರಾ ಸೇವಾ ಕೇಂದ್ರ ಕಚೇರಿಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಉದ್ಘಾಟಿಸಿದರು.

ವೇದಿಕೆಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮೂಡಾ ಮಾಜಿ ಅಧ್ಯಕ್ಷ ಸುರೇಶ್ ಬಳ್ಳಾಲ್, ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವಾಸ್ ದಾಸ್, ಚಿಂತಕರು ಕಾಂಗ್ರೆಸ್ ಮುಖಂಡರಾದ ಎಂಜಿ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮಾನವ ಹಕ್ಕುಗಳ ದ.ಕ. ಜಿಲ್ಲಾ ಸಮಿತಿ ಉಪಾಧ್ಯಕ್ಷ ನವೀನ್ ಜಿ, ಪಿಆರ್‌ಒ ಕ್ಲೆಮೆಂಟ್ ಡಿಸೋಜ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲಾ ಗಟ್ಟಿ , ಕಾಂಗ್ರೆಸ್ ಧುರೀಣರಾದ ಗಣೇಶ್ ಪೂಜಾರಿ ಬಳ್ಳಾಲ್ ಬಾಗ್, ನಿರಂಜನ್ ಗಾಣಿಗ, ಯೋಗೇಶ್ ನಾಯಕ್, ಮಂಜುಳಾ ನಾಯಕ್, ಉಮ್ಮರ್ ಕುಂಞ ಸಾಲೆತ್ತೂರು ಮತ್ತಿತರರು ಉಪಸ್ಥಿತರಿದ್ದರು.

ಮಾನವ ಹಕ್ಕುಗಳ ಘಟಕ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಥೋಮಸ್ ಪ್ರಸಾದ್ ಸ್ವಾಗತಿಸಿದರು, ದಯಾನಂದ ಶೆಟ್ಟಿ ವಂದಿಸಿದರು, ಯಶ್ವಂತ್ ಮೆಂಡನ್ ಬೋಳೂರು ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News