ಮಂಗಳೂರು | ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾಹಿತಿ ಕಾರ್ಯಕ್ರಮ
ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ) ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹೊಸದಾಗಿ ಸೇರಿರುವ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜೇಂದ್ರ ಮೆರ್ತಾ, 21ನೇ ಶತಮಾನದ ಬೇಡಿಕೆಗಳಿಗೆ ಹೊಂದಿಕೊಳ್ಳಲು ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣದ ಅಗತ್ಯತೆ ಬಗ್ಗೆ ಹೇಳಿದರು.
ಬಿಐಟಿ ಪ್ರಾಂಶುಪಾಲರಾದ ಡಾ.ಎಸ್.ಐ. ಮಂಝೂರ್ ಬಾಷಾ ಮಾತನಾಡಿ, ಡಿಪ್ಲೋಮಾ ಕೋರ್ಸ್ ಬಗ್ಗೆ ಮಾಹಿತಿ ನೀಡಿದರು. ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ (BE) ಕೋರ್ಸ್‌ಗಳಿಗೆ ಸೇರುವ ಅಥವಾ ಬ್ಯಾರೀಸ್ ಗ್ರೂಪ್‌ನಲ್ಲಿ ಉದ್ಯೋಗ ಪಡೆಯುವ ಅವಕಾಶಗಳಿವೆ ಎಂದು ಹೇಳಿದರು.
ಡಾ.ಅಝೀಝ್ ಮುಸ್ತಫಾ ಅವರು ಸಂಸ್ಥೆಯ ಇತಿಹಾಸವನ್ನು ಪರಿಚಯಿಸಿದರು. ಪಾಲಿಟೆಕ್ನಿಕ್ ಕೋರ್ಸ್‌ಗಳು ವಿದ್ಯಾರ್ಥಿಗಳನ್ನು ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಹೇಗೆ ಸಹಕರಿಸುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಪೃಥ್ವಿರಾಜ್ ಸ್ವಾಗತಿಸಿದರು. ಪ್ರೊ.ಮಾಲಾಶ್ರೀ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಅಫ್ಶಾನ್ ತರನ್ನಮ್ ವಂದಿಸಿದರು. ನೂತನ ಪ್ರಸಾದ್ ಮತ್ತು ಚಿತ್ತರಂಜನ್ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.