×
Ad

ಮಂಗಳೂರು: ಲಾರಿ ಢಿಕ್ಕಿ; ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು

Update: 2024-10-11 21:34 IST

ಮಂಗಳೂರು: ಪಡೀಲ್ ಬಳಿ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ರಾತ್ರಿ ನಡೆದಿದೆ.

ಮೃತಪಟ್ಟ ಸವಾರನನ್ನು ಅಡ್ಯಾರ್‌ ಪದವಿನ ಜೋಸೆಫ್ ಎಂದು ಗುರುತಿಸಲಾಗಿದೆ.

ಪಡೀಲ್‌ನಿಂದ ಬಿ.ಸಿ‌.ರೋಡ್ ಕಡೆಗೆ ತೆರಳುತ್ತಿದ್ದ ಲಾರಿಯು ಆಗಷ್ಟೇ ಪೆಟ್ರೋಲ್ ತುಂಬಿಸಿ ಬಂಕ್‌ನಿಂದ ಹೊರಬರುತ್ತಿದ್ದ ಆ್ಯಕ್ಟಿವಾಗೆ ಢಿಕ್ಕಿ ‌ಹೊಡೆಯಿತು ಎನ್ನಲಾಗಿದೆ. ಇದರಿಂದ ಸವಾರ ಜೋಸೆಫ್ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News