×
Ad

ಮಂಗಳೂರು: ಮಗುವಿನೊಂದಿಗೆ ತಾಯಿ ನಾಪತ್ತೆ

Update: 2023-08-28 22:00 IST

ಮಂಗಳೂರು, ಆ.28: ನಗರದ ಬಂದರ್ ಜೆಎಂ 2ನೇ ಅಡ್ಡ ರಸ್ತೆಯ ವ್ಯಾಪಾರಿ ಅಬ್ದುರ‌್ರವೂಫ್ ಎಂಬವರ ಪತ್ನಿ ಫಾತಿಮತ್ ಸಫ್ರತ್ (28) ತನ್ನ ಎರಡು ವರ್ಷ ಪ್ರಾಯದ ಮಗುವಿನೊಂದಿಗೆ ಕಾಣೆಯಾಗಿರುವ ಬಗ್ಗೆ ಬಂದರ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಆ.26ರಂದು ಸಂಜೆ 4ಕ್ಕೆ ಎಂದಿನಂತೆ ದೊಡ್ಡ ಮಗಳು ಹಿಬಾಳನ್ನು ಮದ್ರಸಕ್ಕೆ ಬಿಟ್ಟು ಕಚೇರಿಗೆ ತೆರಳಿದ್ದೆ. ಸಂಜೆ 6:30ಕ್ಕೆ ಮದ್ರಸದಿಂದ ಮಗಳು ಹಿಬಾ ಮನೆಗೆ ಬಂದಾಗ ತಾಯಿ ಫಾತಿಮತ್ ಸಫ್ರತ್ ಮನೆಯಲ್ಲಿ ಕಾಣಿಸುತ್ತಿಲ್ಲ ಎಂದು ಆಕೆ ತನಗೆ ಕರೆ ಮಾಡಿ ತಿಳಿಸಿದ ಮೇರೆಗೆ ತಾನು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ.

ಪತ್ನಿ ಫಾತಿಮತ್ ಸಫ್ರತ್ ತನ್ನ 2 ವರ್ಷ ಪ್ರಾಯದ ಮಗುವಿನೊಂದಿಗೆ ನಾಪತ್ತೆಯಾಗಿರುವುದಾಗಿ ಅಬ್ದುರ‌್ರವೂಫ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News