ಮಂಗಳೂರು: ಹೈಲ್ಯಾಂಡ್ ಹಾಸ್ಪಿಟಲ್ ನಲ್ಲಿ ಓಣಂ ಆಚರಣೆ
ಮಂಗಳೂರು: ನಗರದ ಹೈಲ್ಯಾಂಡ್ ಹಾಸ್ಪಿಟಲ್ ನಲ್ಲಿ ಆಡಳಿತ ಮಂಡಳಿಯ ಸಹಕಾರದೊಂದಿಗೆ ಗುರುವಾರ ಓಣಂ ಆಚರಣೆ ನಡೆಯಿತು.
ಅದೇ ದಿನ ಹಾಸ್ಪಿಟಲ್‌ನ 30 ವರ್ಷಗಳು ಪೂರ್ತಿಗೊಂಡಿದ್ದು, ವಿಶೇಷವಾಗಿ ಹಾಸ್ಪಿಟಲ್ ಚೇರ್ಮನ್ ಡಾ. ಸಿ ಪಿ ಅಬ್ದುಲ್ ರಹ್ಮಾನ್ ಅವರ ಜನ್ಮ ದಿನದ ಆಚರಣೆಯು ನಡೆಯಿತು.
ಬಣ್ಣ ಬಣ್ಣದ ಹೂಗಳಿಂದ ಬೃಹತ್ ರಂಗೋಲಿಯನ್ನು ಬಿಡಿಸಿ, ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವೂ ಉದ್ಗಾಟನೆಗೊಳಿಸಲಾಯಿತು. ಸಿಬ್ಬಂದಿಗಳಿಂದ ಮನರಂಜಿಸುವ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು. ಮಧ್ಯಾಹ್ನ ಎಲ್ಲರೂ ಜೊತೆಯಾಗಿ ಓಣಂ ಸದ್ಯವನ್ನು ಸ್ವೀಕರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಚೇರ್ಮನ್ ಡಾ ಸಿ ಪಿ ಅಬ್ದುಲ್ ರಹ್ಮಾನ್ ಅವರ ಪತ್ನಿ ರಝಿಯಾ, ಮೆಡಿಕಲ್ ಡೈರೆಕ್ಟರ್ ಡಾ. ಯಾಸೀರ್ ಅಬ್ದುಲ್ಲಾ ಹಾಗು ಅವರ ಪತ್ನಿ ಡಾ ಶಾಹಿದಾ, ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಮೊಹಮ್ಮದ್ ಯೂನಸ್, ಹೆಚ್ ಆರ್ ಗಣೇಶ್, ನರ್ಸಿಂಗ್ ಸೂಪರಿಡೆಂಟ್ ಲೀನಾ ಅವರು ಉಪಸ್ಥಿತರಿದ್ದರು.
ಸಜಿತ್ ಶೆಟ್ಟಿ ಹಾಗು ಲಿನ್ಹಾ ಮರಿಯಂ ಕಾರ್ಯಕ್ರಮವನ್ನು ನಿರೂಪಿಸಿದರು.