×
Ad

ಮಂಗಳೂರು | ಮೂಲತ್ವ ವಿಶ್ವ ಪ್ರಶಸ್ತಿ ಪ್ರದಾನ

Update: 2025-11-18 21:33 IST

ಮಂಗಳೂರು, ನ.18: ನಾನೇ ನೀನು... ನೀನೇ ನಾನು... ಎಂಬ ತತ್ವದಡಿ ಕಾರ್ಯಾಚರಿಸುತ್ತಿರುವ ಮೂಲತ್ವ ಫೌಂಡೇಶನ್ ಚಾರಿಟೆಬಲ್ ಟ್ರಸ್ಟ್ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಸಮಾಜ ಸೇವೆಯೇ ಟ್ರಸ್ಟ್ ನ ಮೂಲ ಉದ್ದೇಶವಾಗಿದ್ದು, ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡವರನ್ನು ಗುರುತಿಸಿ ಗೌರವಿಸುವ ಮೂಲತ್ವ ಫೌಂಡೇಶನ್ ಚಾರಿಟೆಬಲ್ ಟ್ರಸ್ಟ್ ನ ಕಾರ್ಯಪ್ರಸಂಶನೀಯ ಎಂದು ಆರ್‌ಎಸ್ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ಡಾ.ಪಿ.ವಾಮನ ಶೆಣೈ ಹೇಳಿದರು.

ಮಂಗಳೂರಿನ ಮೂಲತ್ವ ಫೌಂಡೇಶನ್ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ನಗರದ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ನಡೆದ ಬೆಂಗಳೂರಿನ ನೆಲೆ ಫೌಂಡೇಶನ್‌ಗೆ ಮೂಲತ್ವ ವಿಶ್ವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಧನೆ ಎಲ್ಲರೂ ಮಾಡಬಹುದು. ಆದರೆ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಸಮಾಜಿಮುಖಿಯಾಗಿದೆ. ಸಾಧನೆ ಗೌರವ ಎಲ್ಲವೂ ಮನುಷ್ಯನ ದೃಷ್ಟಿಕೋನದಲ್ಲಿ ಅಡಗಿದೆ. ದೃಷ್ಟಿಕೋನ ಸರಿಯಾಗಿದ್ದರೆ ಬದುಕು ಸುಂದರವಾಗಿ ಕಾಣುತ್ತದೆ. ಸಮಸ್ಯೆ ಎದುರಾದಾಗ ಅದನ್ನು ಗೆಲ್ಲುವ ಛಲ ನಮ್ಮದಾಗಬೇಕು. ಧೈರ್ಯದಿಂದ ಇದ್ದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಈ ಮೂಲಕ ಮೂಲತ್ವ ವಿಶ್ವ ಪ್ರಶಸ್ತಿಯು ಸಮಾಜದಲ್ಲಿ ಸಾಧನೆ ಮಾಡುವರಿಗೆ ಶಕ್ತಿ ನೀಡುವಂತಾಗಲಿ ಎಂದರು.

ಬೆಂಗಳೂರಿನ ನೆಲೆ ಫೌಂಡೇಶನ್ ಅಧ್ಯಕ್ಷ ಶಿವಕುಮಾರ್ ಮೂಲತ್ವ ವಿಶ್ವ ಪ್ರಶಸ್ತಿ ಸ್ವೀಕರಿಸಿದರು. ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಚಲನಚಿತ್ರ ನಿರ್ಮಾಪಕ ರವಿ ರೈ ಕಳಸ, ಬೆಂಗಳೂರಿನ ನೆಲೆ ಫೌಂಡೇಶನ್ ಟ್ರಸ್ಟಿ ಸುರೇಶ್, ಮೂಲತ್ವ ಫೌಂಡೇಶನ್ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಪ್ರಕಾಶ್ ಕೋಟ್ಯಾನ್, ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಶೈನಿ, ಅಕ್ಷತಾ ಕದ್ರಿ, ಲಕ್ಷ್ಮೀಶ ಪಿ. ಕೋಟ್ಯಾನ್ ಉಪಸ್ಥಿತರಿದ್ದರು.

ಮೂಲತ್ವ ವಿಶ್ವ ಪ್ರಶಸ್ತಿ ಸಂಚಾಲಕ ಡಿ.ಎಂ. ಜಯಕುಮಾರ್ ವಂದಿಸಿದರು. ಡಾ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News