ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಶನ್ ನಿಂದ 'ಪ್ರೊಫೆಷನಲ್ ಫ್ಯಾಮಿಲಿ ಮೀಟ್'
Update: 2024-11-04 16:18 IST
ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಶನ್, ಮಂಗಳೂರು ಘಟಕದ ವತಿಯಿಂದ ಪ್ರೊಫೆಷನಲ್ ಫ್ಯಾಮಿಲಿ ಮೀಟ್ ಕಾರ್ಯಕ್ರಮ ರವಿವಾರ ಮಂಗಳೂರಿನ ರಾಯಲ್ ಫ್ಲಾಝಾ ಸಭಾಂಗಣದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಹೃದ್ರೋಗ ತಜ್ಞ ಡಾ.ಯೂಸುಫ್ ಎ. ಕುಂಬ್ಳೆ ಕೆಲಸ ಮತ್ತು ಜೀವನದ ಹೊಂದಾಣಿಕೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.
ವೃತ್ತಿಜೀವನದಲ್ಲೂ ಆದರ್ಶ, ಬದ್ಧತೆಯನ್ನು ಪಾಲಿಸುವಂತೆ ಡಾ.ರಾಝಿಕ್ ಸೌದಾಗರ್ ನಝೀರಿ ಕರೆ ನೀಡಿದರು. ಕುಟುಂಬ, ಸಮಾಜ ಮತ್ತು ವೃತ್ತಿ ಜೀವನದ ಮಾಧುರ್ಯವನ್ನು ಹೇಗೆ ಸವಿಯಬಹುದೆಂದು ಡಾ.ಜೌಹರ್ ಮುನವ್ವರ್ ಮಾತನಾಡಿದರು.
ಕೆ.ಎಸ್.ಎ. ಮಂಗಳೂರು ಘಟಕದ ಅಧ್ಯಕ್ಷ ಸಯ್ಯದ್ ಶಾಝ್ ವೇದಿಕೆಯಲ್ಲಿದ್ದರು.
ಯಾಸಿರ್ ಅಲ್ ಹಿಕಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಸಂಚಾಲಕ ಅಬ್ದುಲ್ ಸಲಾಂ ಸ್ವಾಗತಿಸಿದರು. ಮುಹಮ್ಮದ್ ವಂದಿಸಿದರು. ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.