×
Ad

ಮಂಗಳೂರು : ಈಡಿ ವಿಚಾರಣೆಗೆ ಹಾಜರಾದ ಸಾಗರ ನಗರಸಭೆ ಸದಸ್ಯ ಟಿಪ್‌ ಟಾಪ್‌ ಬಶೀರ್

Update: 2025-06-25 14:40 IST

ಮಂಗಳೂರು : ಜೂ.25, ಹೆಸರಾಂತ ಉದ್ಯಮಿ ಹಾಗೂ ಸಾಗರ ನಗರಸಭಾ ಸದಸ್ಯ ಟಿಪ್ ಟಾಪ್ ಬಶೀರ್ ಅವರು ಯೆಯ್ಯಾಡಿಯಲ್ಲಿರುವ ಈಡಿ ಕಚೇರಿಗೆ ಬುಧವಾರ ವಿಚಾರಣೆಗೆ ಆಗಮಿಸಿದ್ದಾರೆ.

ಇತ್ತೀಚೆಗೆ (ಜೂ.21) ಸಾಗರದಲ್ಲಿರುವ ಬಶೀರ್ ಅವರ ನಿವಾಸಕ್ಕೆ ಈಡಿ ದಾಳಿ ನಡೆಸಿತ್ತು. 7ಅಧಿಕಾರಿಗಳ ತಂಡದಿಂದ ಸತತ 18ಗಂಟೆಗಳ ಕಾಲ ದಾಖಲೆ ಪರಿಶೀಲನೆ ನಡೆಸಲಾಗಿತ್ತು.

ಜೂ.25ರಂದು ಬುಧವಾರ ಈಡಿ ಅಧಿಕಾರಿಗಳು ಬಷೀರ್ ಅವರನ್ನು ವಿಚಾರಣೆಗೆ ಕರೆದಿದ್ದರು. ಈ ಹಿನ್ನೆಲೆಯಲ್ಲಿ ಟಿಪ್ ಟಾಪ್ ಬಷೀರ್ ಮಂಗಳೂರಿನಲ್ಲಿರುವ ಈಡಿ ಕಚೇರಿಗೆ ಹಾಜರಾದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಟಿಪ್ ಟಾಪ್ ಬಶೀರ್ ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದಂತೆ ಈಡಿ ವಿಚಾರಣೆ ಬರಲು ತಿಳಿಸಿದ್ದರು. ಅಧಿಕಾರಿಗಳ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ,‌ ಅವರು ಕೇಳಿದ ದಾಖಲೆಗಳನ್ನು ಕೊಟ್ಟಿದ್ದೇನೆ.ಮುಂದಿನ ದಿನಗಳಲ್ಲಿ ವಿಚಾರಣೆಗೆ ಕರೆದಾಗ ಬರಲು ತಿಳಿಸಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News