×
Ad

ಮಂಗಳೂರು | ನ.23 ರಂದು ಸಂಸದ್ ಖೇಲ್ ಮಹೋತ್ಸವ ಅಂಗವಾಗಿ ಮಂಗಳೂರಿನಲ್ಲಿ ನಮೋ ಚೆಸ್ ಟೂರ್ನಮೆಂಟ್ ಆಯೋಜನೆ

Update: 2025-11-22 21:59 IST

ಮಂಗಳೂರು, ನ.22: ಸಂಸದ್ ಕ್ರೀಡಾ ಮಹೋತ್ಸವ ಪ್ರಯುಕ್ತ ನ.23ರಂದು ಮಂಗಳೂರು ನಗರದಲ್ಲಿ ‘ನಮೋ ಚೆಸ್ ಟೂರ್ನಮೆಂಟ್ ’ ಆಯೋಜಿಸಲಾಗಿದೆ. ನಗರದ ಯುಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಈ ನಮೋ ಚೆಸ್ ಟೂರ್ನಮೆಂಟ್ ನಡೆಯಲಿದೆ.

ಈಗಾಗಾಲೇ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲು 500ಕ್ಕೂ ಹೆಚ್ಚು ಆಸಕ್ತರಿಂದ ನೋಂದಾವಣೆಯಾಗಿದ್ದು, ಸಬ್ ಜ್ಯೂನಿಯರ್ (ಯು-10) ಬಾಲಕ ಮತ್ತು ಬಾಲಕಿಯರ , ಜ್ಯೂನಿಯರ್ (ಯು-15) ಬಾಲಕ ,ಬಾಲಕಿಯರ , ಓಪನ್ ಕೆಟಗರಿ ಈ ಮೂರು ವಿಭಾಗದಲ್ಲಿ ಟೂರ್ನಮೆಂಟ್ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಅಂದು ಬೆಳಗ್ಗೆ8ಕ್ಕೆ ತಪ್ಪದೇ ಕಡ್ಡಾಯವಾಗಿ ಹೆಸರು ನೋಂದಾಯಿಸಬೇಕಾಗಿದ್ದು, 8.30ಕ್ಕೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ನಡೆಯಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕಾಗಿ ಫಿಟ್ ಯುವ ಪರಿಕಲ್ಪನೆಯಡಿ ಈ ಕ್ರೀಡಾ ಮಹೋತ್ಸವ ಆಯೋಜಿಸಲಾಗಿದೆ. ನ.23ರ ಬಳಿಕ ಪ್ರತಿ ವಾರವು ಸಂಸದ್ ಖೇಲ್ ಮಹೋತ್ಸವ ಅಂಗವಾಗಿ ವಾಲಿಬಾಲ್, ತ್ರೋಬಾಲ್, ಕುಸ್ತಿ, ಕಬ್ಬಡ್ಡಿ, ಹಗ್ಗ - ಜಗ್ಗಾಟ, ಕ್ರಿಕೆಟ್, ಬ್ಯಾಡ್ಮಿಂಟನ್ ಪಂದ್ಯಾಟಗಳನ್ನು ಆಯೋಜಿಸಲಾಗುತ್ತದೆ. ಈ ವಾರ ಚೆಸ್ ಟೂರ್ನಮೆಂಟ್ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳು, ಯುವಕರು ಸೇರಿ ಕ್ರೀಡಾಸಕ್ತರು ಈ ಟೂರ್ನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ್ ಕಾಮತ್, ವಿ.ಪ.ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಮೇಶ್ ಕೋಟೆ, ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಸುನೀಲ್ ಅಚಾರ್, ಜಿಲ್ಲಾಧ್ಯಕ್ಷ ಅಮರಶ್ರೀ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News