×
Ad

ಮಂಗಳೂರು: ಹಾಸ್ಟೆಲ್‌ಗೆ ಕಲ್ಲೆಸೆದ ಆರೋಪ; ಯುವಕ ಸೆರೆ

Update: 2023-11-03 20:03 IST

ಮಂಗಳೂರು: ತಾನು ಪ್ರೀತಿಸುತ್ತಿದ್ದ ಯುವತಿ ತನ್ನೊಂದಿಗೆ ಸುತ್ತಾಡಲು ಬಾರದ ಸಿಟ್ಟಿನಿಂದ ಯುವಕನೊಬ್ಬ ಪಿಜಿ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ನಗರದಲ್ಲಿ ನಡೆದಿದೆ.

ಆರೋಪಿ ಸುಳ್ಯದ ವಿವೇಕ್ (18) ಎಂಬಾತನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ನಗರದ ಸಂತ ಆ್ಯಗ್ನೆಸ್ ಕಾಲೇಜು ಸಮೀಪ ಗುರುವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಆಕ್ರೋಶಿತ ಸಾರ್ವಜನಿಕರು ಯುವಕನಿಗೆ ಹಲ್ಲೆಗೈದು ಬಳಿಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಸುಳ್ಯದ ವಿವೇಕ್ ಎಂಬಾತ ನಗರದಲ್ಲಿ ಇಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ. ಈತ ಪಿಜಿಯಲ್ಲಿ ಕೆಲಸಕ್ಕಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಗುರುವಾರ ಸಂಜೆ ಆಕೆಯನ್ನು ಯುವಕನು ಸುತ್ತಾಡಲು ಕರೆದಿದ್ದ. ಆದರೆ ಆಕೆ ಅದಕ್ಕೆ ಒಪ್ಪದ ಕಾರಣ ಸಿಟ್ಟಾದ ವಿವೇಕ್ ಆಕೆ ಕೆಲಸ ಮಾಡುತ್ತಿದ್ದ ಪಿಜಿ ಹಾಸ್ಟೆಲ್ ಕಟ್ಟಡದ ಗಾಜುಗಳಿಗೆ ಕಲ್ಲೆಸೆದ ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News