ಮಂಗಳೂರು | ಕೂರತ್ ತಂಙಳ್ ಸ್ಮರಣಾರ್ಥ ಆ್ಯಂಬುಲೆನ್ಸ್ ಲೋಕಾರ್ಪಣೆ
Update: 2025-11-26 18:19 IST
ಮಂಗಳೂರು, ನ.26: ದ.ಕ. ಜಿಲ್ಲಾ ಸಂಯುಕ್ತ ಖಾಝಿಯಾಗಿದ್ದ ಖುರ್ರತುಸ್ಸಾದಾತ್ ಸೈಯದ್ ಕೂರತ್ ತಂಙಳ್ ಅವರ ಸ್ಮರಣಾರ್ಥ ಎನರ್ಜಿಯಾ ಎಂಟಿಸಿ ಸೌದಿ ಅರೇಬಿಯಾ ಇದರ ಸಿಇಒ ಹಾಗೂ ಯುವ ಉದ್ಯಮಿ ಹಸನ್ ಶಾಹಿದ್ ಅವರ ಎನರ್ಜಿಯಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ತಾಜುಲ್ ಉಲಮಾ ಹೆಲ್ಪ್ವಿಂಗ್ ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಶನ್ (ರಿ) ವತಿಯಿಂದ ನೂತನ ಆ್ಯಂಬುಲೆನ್ಸ್ ನ ಲೋಕಾರ್ಪಣೆ ಕಾರ್ಯಕ್ರಮವು ಬುಧವಾರ ನಗರದಲ್ಲಿ ನಡೆಯಿತು.
ಸೈಯದ್ ಮಶ್ಊದ್ ಅಲ್ ಬುಖಾರಿ ಕೂರತ್ ಅಧ್ಯಕ್ಷತೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಲೋಕಾರ್ಪಣೆಗೊಳಿಸಿದರು. ಮುಖ್ಯ ಅತಿಥಿಯಾಗಿ ಎಸ್.ಎಂ.ರಶೀದ್ ಹಾಜಿ ಭಾಗವಹಿಸಿದ್ದರು. ಹೆಲ್ಪ್ವಿಂಗ್ ಅಧ್ಯಕ್ಷ ಖಾಲಿದ್ ಹಾಜಿ ಸ್ವಾಗತಿಸಿದರು.