ಮಂಗಳೂರು | ಬಿ.ಫಾರ್ಮ್ ಪರೀಕ್ಷೆ : ಫಾದರ್ ಮುಲ್ಲರ್ ಕಾಲೇಜಿಗೆ ಶೇ.94 ಫಲಿತಾಂಶ
Update: 2025-11-27 00:08 IST
ಮಂಗಳೂರು, ನ.26: ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ ನಡೆಸಿದ 2ನೇ ಸೆಮಿಸ್ಟರ್ ಬಿ. ಫಾರ್ಮ್ ಪರೀಕ್ಷೆಯಲ್ಲಿ ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಶೇ.94 ಫಲಿತಾಂಶ ದಾಖಲಿಸಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 4 ವಿದ್ಯಾರ್ಥಿಗಳು ಪ್ರಥಮ ದರ್ಜೆ ಗಳಿಸಿದ್ದಾರೆ. ರೋಗಶಾಸ್ತ್ರ ಮತ್ತು ಔಷಧೀಯ ಸಾವಯವ ರಸಾಯನಶಾಸ್ತ್ರ ಶೇ.100, ಜೀವರಸಾಯನಶಾಸ್ತ್ರ, ಮಾನವ ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರ ವಿಷಯದಲ್ಲಿ ಶೇ.94 ಫಲಿತಾಂಶ ಬಂದಿದೆ.
ಕಾಲೇಜಿನ ಸಾಧನೆಗೆ ಎಫ್‌ಎಂಸಿಐ ನಿರ್ದೇಶಕ ಫಾ.ಫೌಸ್ಟಿನ್ ಲ್ಯೂಕಾಸ್ ಲೋಬೊ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ. ಆಡಳಿತಾಧಿಕಾರಿ ಫಾ.ಡೊನಾಲ್ಡ್ ನೀಲೇಶ್ ಕ್ರಾಸ್ತಾ ಮತ್ತು ಪ್ರಾಂಶುಪಾಲ ಡಾ.ಎಸ್.ಸತೀಶ್‌ರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.