Mangaluru | ಕ್ರೆಡೈ ಬಿಲ್ಡ್‌ಸ್ಮಾರ್ಟ್ ಇನೋವೇಶನ್ ಚಾಲೆಂಜ್ 2025: ನವೋದ್ಯಮಿಗಳು, ವಿದ್ಯಾರ್ಥಿಗಳಿಂದ ಹೊಸ ಸ್ಟಾರ್ಟ್‌ಅಪ್‌ಗಳ ಆಹ್ವಾನ
ಮಂಗಳೂರು, ನ.27: ನಗರದ ಕ್ರೆಡೈ, ಸೆಕ್ಷನ್ ಇನ್ಫಿನ್- 8 ಫೌಂಡೇಶನ ಮತ್ತು ಮಿಷನ್ ಉತ್ತಾನ್ ಸಹಯೋಗದಲ್ಲಿ ‘ಕ್ರೆಡೈ ಬಿಲ್ಡ್‌ಸ್ಮಾರ್ಟ್ ಇನೋವೇಶನ್ ಚಾಲೆಂಜ್ 2025ಗಾಗಿ ನವೋದ್ಯಮಿಗಳು ಹಾಗೂ ವಿದ್ಯಾರ್ಥಿಗಳಿಂದ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಹೊಸ ಸ್ಟಾರ್ಟ್‌ಅಪ್ ಹಾಗೂ ನವೀನ ಆಲೋಚನೆಗಳನ್ನು ಆಹ್ವಾನಿಸಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕ್ರೆಡೈ ಸಿಇಒ ಅರ್ಜುನ್ ಜೆ. ರಾವ್, ಈಗಾಗಲೇ ಸುಮಾರ 30ರಷ್ಟು ನವೋದ್ಯಮಿಗಳು ತಮ್ಮ ಹೊಸ ಸ್ಟಾರ್ಟ್‌ಅಪ್‌ಗಳ ಕುರಿತಂತೆ ಈ ಚಾಲೆಂಜ್‌ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದ್ದಾರೆ. ನ. 30ರವರೆಗೆ ಹೊಸ ಆಲೋಚನೆಗಳಿಂದ ಕೂಡಿದ ಹೊಸ ಉದ್ಯಮ, ಸ್ಟಾರ್ಟ್‌ಅಪ್‌ಗಳ ಐಡಿಯಾ ಹೊಂದಿರುವ ವಿದ್ಯಾರ್ಥಿಗಳನ್ನು ಒಳಗೊಂಡು ಈ ಚಾಲೆಂಜ್‌ನಲ್ಲಿ ಭಾಗವಹಿಸಬಹುದು ಎಂದರು.
ಮಂಗಳೂರು: ಕ್ರೆಡೈ ಮಂಗಳೂರು ಮತು ಸೆಕ್ಷನ್ ಇನ್ಫಿನ್ 8 ಫೌಂಡೇಶನ್ (ಎಸ್‌ಐ-8) ಸಹಭಾಗಿತ್ವದ ಎಮರ್ಜ್ 2025- ಭಾರತ ಮೊದಲ ಸ್ಟಾರ್ಟ್‌ಅಪ್ ಬೀಚ್ ಉತ್ಸವದಲ್ಲಿ ಅಧಿಕೃತವಾಗಿ ಆರಂಭಗೊಂಡಿದೆ. ಇದು ಕರಾವಳಿ ಕರ್ನಾಟಕದ ಸ್ಟಾರ್ಟ್‌ಅಪ್ ಮತ್ತು ಪರಿಸರ ಸಹ್ಯ ಉದ್ಯಮಕ್ಕೆ ಪ್ರೇರಣೆ ನೀಡಿದೆ. ಪ್ರಸಕ್ತ ಸಾಲಿನ ಕ್ರೆಡೈ ಬಿಲ್ಡ್‌ಸ್ಮಾರ್ಟ್ ಇನೋವೇಶನ್ ಚಾಲೆಂಜ್ 2025ಗೆ ಸಲ್ಲಿಕೆಯಾಗುವ ಸ್ಟಾರ್ಟ್‌ಅಪ್‌ಗಳ ಪ್ರೊಟೋಟೈಪ್‌ಗಳು 2026ರ ಜನವರಿ 9ರಿಂದ 11ರವರೆಗೆ ತಣ್ಣೀರುಬಾವಿಯಲ್ಲಿ ನಡೆಯುವ ಎಮರ್ಜ್ 2026ರಲ್ಲಿ ಪ್ರದರ್ಶನಗೊಳ್ಳಲಿವೆ. ಆಯ್ದ ತಂಡಕ್ಕೆ 1 ಲಕ್ಷ ರೂ. ನಗದು ಬಹುಮಾನ, ಕ್ರೆಡೈ ಉದ್ಯಮ ನಾಯಕರಿಂದ ಮಾರ್ಗದರ್ಶನ, ಪೈಲಟ್ ಯೋಜನೆಗಳಿಗೆ ಅಕವಾಶ, ಎಸ್‌ಐ-8 ಮತ್ತು ಮಿಷನ್ ಉತ್ತಾನ್‌ನಿಂದ ಇಂಕ್ಯುಬೇಷನ್ ಬೆಂಬಲ, ಟಾಪ್ 10 ತಂಡಗಳಿಗೆ ಡಿಸೆಂಬರ್ ತಿಂಗಳಲ್ಲಿ ವೃತ್ತಿಪರ ಮಾರ್ಗದರ್ಶನ ದೊರೆಯಲಿದೆ ಎಂದು ಎಸ್‌ಐ-8ನ ಸಂಸ್ಥಾಪಕ ನಿರ್ದೇಶಕ ವಿಶ್ವಾಸ್ ಯು.ಎಸ್.ತಿಳಿಸಿದರು.
ವಿದ್ಯಾರ್ಥಿಗಳ ಹೊಸ ಆಲೋಚನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹೊಸ ಆಲೋಚನೆಗಳಿಗೆ ಬಲ ತುಂಬುವ ಜತೆಗೆ ವೇದಿಕೆ ಕಲ್ಪಿಸಲಾಗತ್ತದೆ ಹಾಗೂ ಸರಕಾರಗಳಿಂದ ನವೋದ್ಯಮಕ್ಕೆ ದೊರಕುವ ಅನುದಾನವನ್ನು ಒದಗಿಸಲು ಪ್ರಯತ್ನಿಸಲಾಗುವುದು.
ಕ್ರೆಡೈ ಬಿಲ್ಡ್‌ಸ್ಮಾರ್ಟ್ ಇನೋವೇಶನ್ ಚಾಲೆಂಜ್ 2025ನಲ್ಲಿ ಭಾಗವಹಿಸುವವರು ನಿರ್ಮಾಣ ತ್ಯಾಜ್ಯ ನಿರ್ವಹಣೆ, ಕ್ರೆಡೈ ಸದಸ್ಯ ಅಪ್ಲಿಕೇಶನ್, ರೇರಾ ಸಿಂಗಲ್ - ವಿಂಡೋ ಅನುಮೋದನಾ ವ್ಯವಸ್ಥೆ, ಏಕೀಕೃತ ನಿರ್ಮಾಣ ಕಾರ್ಮಿಕ ವೇದಿಕೆ, ಮುಕ್ತ ನವೀನತಾ ಸವಾಲ್- ಹಸಿರು ಭವಿಷ್ಯ ನಿರ್ಮಾಣದ ವಿಷಯದಲ್ಲಿ ಹೊಸ ಆಲೋಚನೆಗಳನ್ನು ಪ್ರದರ್ಶಿಸಬಹುದಾಗಿದೆ. ಈ ಮೂಲಕ ರಿಯಲ್ ಎಸ್ಟೇಲ್ ವಲಯವನ್ನು ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಹಾಗೂ ಪರಿಸರ ಸ್ನೇಹಿಯಾಗಿಸಲು ಪರಿಹಾರಗಳನ್ನು ಕಂಡುಕೊಳ್ಳುವುದು ನಮ್ಮ ಉದ್ದೇಶ ಎಂದು ಕ್ರೆಡೈ ಯೂತ್ ವಿಂಗ್‌ನ ಕಾರ್ಯದರ್ಶಿ ಮಿರಾಜ್ ಯೂಸುಫ್ ತಿಳಿಸಿದರು.