×
Ad

Mangaluru | ರಾ.ಹೆ.75ರ ವಳಚ್ಚಿಲ್-ಅಡ್ಯಾರ್ ಮಧ್ಯೆ ಮಾರಕ ಡಿವೈಡರ್

ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಅಪಘಾತ ಹೆಚ್ಚಳ: ಎಸ್ಕೆಎಸೆಸ್ಸೆಫ್ ವಳಚ್ಚಿಲ್ ಶಾಖೆ ಕಳವಳ

Update: 2025-11-26 17:05 IST

ಮಂಗಳೂರು, ನ.26:ರಾ.ಹೆ.75ರ ವಳಚ್ಚಿಲ್- ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಮಧ್ಯೆ ನಿರ್ಮಿಸಲಾದ ಡಿವೈಡರ್ ಮಾರಕವಾಗಿದೆ. ಸರಕಾರದ ನಿರ್ಲಕ್ಷ್ಯದಿಂದ ಅಪಘಾತ ಹೆಚ್ಚಳವಾಗುತ್ತಿದೆ ಎಂದು ಎಸ್ಕೆಎಸೆಸ್ಸೆಫ್ ವಳಚ್ಚಿಲ್ ಶಾಖೆ ಕಳವಳ ವ್ಯಕ್ತಪಡಿಸಿದೆ.

ರಾಷ್ಟ್ರೀಯ ಹೆದ್ದಾರಿಯ ವಳಚ್ಚಿಲ್ ನಿಂದ ಅಡ್ಯಾರ್ ಸಹ್ಯಾದ್ರಿ ಕಾಲೇಜು ಕಡೆಗೆ ಸಾಗುವ ರಸ್ತೆಯ ಮಧ್ಯೆ ನಿರ್ಮಿಸಲಾದ ಡಿವೈಡರ್ ಅಪಾಯದ ಸಂಕೇತವಾಗಿ ಪರಿಣಮಿಸಿದೆ. ಕೆಲವು ತಿಂಗಳಿಂದ ಇಲ್ಲಿ ಅನೇಕ ಅಪಘಾತಗಳು ಸಂಭವಿಸಿದೆ. ಡಿವೈಡರ್ ಬಳಿ ಸರಿಯಾದ ಸೂಚನಾ ಫಲಕಗಳು, ವಾಹನ ಚಲನವಲನ ಎಚ್ಚರಿಕೆ ಸೂಚಿಗಳು ಇಲ್ಲದಿರುವುದೇ ಅಪಘಾತಗಳ ಪ್ರಮುಖ ಕಾರಣವಾಗಿದೆ. ಮೊನ್ನೆ ವ್ಯಕ್ತಿಯೊಬ್ಬರು ಇಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದು ಸ್ಥಳೀಯರಲ್ಲಿ ಭೀತಿಯನ್ನು ಹುಟ್ಟಿಸಿದೆ. ಹಲವು ಬಾರಿ ಈ ಬಗ್ಗೆ ದೂರು ನೀಡಿದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಶಾಶ್ವತ ಪರಿಹಾರ ಕ್ರಮ ಕೈಗೊಂಡಿಲ್ಲ.

ದಿನನಿತ್ಯ ನೂರಾರು ವಿದ್ಯಾರ್ಥಿಗಳು, ಕಾರ್ಮಿಕರು, ಉದ್ಯೋಗಿಗಳು ಈ ಡಿವೈಡರ್ ಬಳಸಿ ಅತ್ತಿಂದಿತ್ತ ಹೋಗುತ್ತಿದ್ದಾರೆ. ಇಲ್ಲಿ ಸರಿಯಾದ ಎಚ್ಚರಿಕೆ ಫಲಕ, ದೀಪದ ವ್ಯವಸ್ಥೆ ಮಾಡಿದರೆ ಜೀವಹಾನಿ ತಪ್ಪಿಸಬಹುದು. ಅಪಘಾತದಿಂದ ಮೃತಪಟ್ಟ ಹಾಗೂ ಗಾಯಗೊಂಡವರ ಕುಟುಂಬಗಳು ನ್ಯಾಯಕ್ಕಾಗಿ ಕಾದು ಕುಳಿತಿವೆ ಎಂದು ಎಸ್ಕೆಎಸೆಸ್ಸೆಫ್ ವಳಚ್ಚಿಲ್ ಶಾಖೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News