×
Ad

ಮಂಗಳೂರು | ಜನತಾ ಆಟೋರಿಕ್ಷಾ ಚಾಲಕರು, ಸಾರಿಗೆ ಕೆಲಸಗಾರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Update: 2025-12-22 17:33 IST

ಮಂಗಳೂರು, ಡಿ.22: ಜನತಾ ಆಟೋರಿಕ್ಷಾ ಚಾಲಕರು ಮತ್ತು ಸಾರಿಗೆ ಕೆಲಸಗಾರರ (ಎಚ್ಎಂಎಸ್) ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಗರದ ಡಾನ್ಬಾಸ್ಕೋ ಹಾಲ್ ನಲ್ಲಿ ಜರುಗಿತು. ಈ ಸಂದರ್ಭ ಮೂವರು ರಿಕ್ಷಾ ಚಾಲಕರನ್ನು ಸನ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ಶೆಟ್ಟಿ ಬೋಳಾರ, ಅಧ್ಯಕ್ಷರಾಗಿ ಯಾದವ ಉಳ್ಳಾಲ, ಉಪಾಧ್ಯಕ್ಷರಾಗಿ ಸುಕುಮಾರ ಜೈನ್, ಕಾರ್ಯದರ್ಶಿಯಾಗಿ ರಾಜೀವ ಕುಡ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ದಿನಕರ ಅತ್ತಾವರ, ಕೋಶಾಧಿಕಾರಿಯಾಘಿ ಜಯರಾಜ್ ಜೆಪ್ಪು, ಸಂಘಟನಾ ಕಾರ್ಯದರ್ಶಿಯಾಗಿ ಲಕ್ಷ್ಮಣ ಮಳಲಿ, ಸಲಹೆಗಾರರಾಗಿ ಬಿ. ಸಂಜೀವ ಒಕ್ಕಲಿಗ ಆಯ್ಕೆಯಾದರು.

ಸಮಿತಿಯ ಸದಸ್ಯರಾಗಿ ಜಯರಾಜ್ ಬಿಜೈ, ಡೋಲ್ಫಿ ಮೊಂತೆರೋ, ಉದಯ ಮುಳಿಹಿತ್ಲು, ನರಸಿಂಹ ಶೆಟ್ಟಿ, ಅವಿನಾಶ್ ಮುಳಿಹಿತ್ಲು, ಜನಾರ್ದನ ಬಾಳಿಗ, ವಿನಯ ಬೋಳಾರ, ಉದಯ ಹೊಗೆಬಜಾರ್, ಮಾಣಿಕ್ಯ ಜೈನ್, ವಿನೋದ್ ಚೆಂಬುಗುಡ್ಡೆ, ದಿನೇಶ್ ಮುಳಿಹಿತ್ಲು, ಸುರೇಶ್ ಕಿನ್ನಿಗೋಳಿ, ಹರ್ಷರಾಜ್ ಗೂಡ್ಸ್ಶೆಡ್, ಜಯಾನಂದ, ಪ್ರಕಾಶ್ ಉಳ್ಳಾಲ, ನರೇಂದ್ರ ಕುಮಾರ ಆಯ್ಕೆಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News