×
Ad

ಮುಡಿಪು | ಕಸದ ಸಮರ್ಪಕ ನಿರ್ವಹಣೆಯಿಂದ ಗ್ರಾಮ ಪಂಚಾಯತ್ ಗೆ ಆರ್ಥಿಕ ಸ್ವಾವಲಂಬನೆ ಸಾಧ್ಯ : ಉದಯ ಕುಮಾರ್ ಶೆಟ್ಟಿ

ʼಅಕ್ಷರೋತ್ಸವ -ಸ್ವಚ್ಚೋತ್ಸವ 2025ʼ

Update: 2025-12-22 18:01 IST

ಮುಡಿಪು : ಗ್ರಾಮ ಪಂಚಾಯತ್ ಗಳು ತಮ್ಮ ಪಂಚಾಯತ್ ಗಳಲ್ಲಿ ಸಂಗ್ರಹವಾಗುವ ಕಸವನ್ನು ಸಮರ್ಪಕವಾಗಿ ನಿರ್ವಹಿಸಿದರೆ ಅದು ಸಂಪತ್ತಾಗಬಹುದು. ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು. ವಂಡ್ಸೆ ಗ್ರಾಮ ಪಂಚಾಯತ್ ಇದಕ್ಕೊಂದು ಉದಾಹರಣೆಯಾಗಿದೆ ಎಂದು ರಾಷ್ಟ್ರ ಮಟ್ಟದ ಮಾದರಿ ಕಸ ನಿರ್ವಹಣೆ ಘಟಕದ ರೂವಾರಿ ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಅವರು ಮುಡಿಪು ಜನ ಶಿಕ್ಷಣ ಟ್ರಸ್ಟ್ ನ ಜೀವನ್ ಮೂರ್ತಿ ಸರ್ವೋದಯ ಮಂಟಪದಲ್ಲಿ ಜರುಗಿದ ನವ ಸಾಕ್ಷರರ ಸಂಘಟನೆಯ 34ನೇ ವರ್ಷದ ಅಕ್ಷರೋತ್ಸವ- ಸ್ವಚ್ಚೋತ್ಸವನ್ನು ಉದ್ಘಾಟಿಸಿ ಮಾತನಾಡುತ್ತಾ, ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸಿ ಶೂನ್ಯ ಕಸ ನಿರ್ವಹಣೆ ಮೂಲಕ ಸುಸ್ಥಿರ ಸ್ವಚ್ಛತೆ ಸಾಧಿಸಿ ಸುತ್ತ ಮುತ್ತಲಿನ 6 ಪಂಚಾಯತ್ ಗಳ ಘನ ತ್ಯಾಜ್ಯ ನಿರ್ವಹಣೆ ಜವಾಬ್ದಾರಿಯನ್ನು ಸಮುದಾಯದ ಸಹಭಾಗಿತ್ವದಲ್ಲಿ ವಂಡ್ಸೆಯಲ್ಲಿ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದರು.

ಜನರು, ಜನ ಪ್ರತಿನಿಧಿಗಳು, ಅಧಿಕಾರಿಗಳು ಒಮ್ಮನಸ್ಸಿನಿಂದ ಒಗ್ಗೂಡಿ ಸತ್ಯ ಮತ್ತು ಪ್ರಾಮಾಣಿಕತೆಯಿಂದ ನಿರಂತರವಾಗಿ ಶ್ರಮಿಸಿದ ಫಲವಾಗಿ ವಂಡ್ಸೆಯನ್ನು ಸ್ವಚ್ಚ ಗ್ರಮ ಪಂಚಾಯತ್ ಆಗಿ ಪರವರ್ತಿಸಲಾಯಿತು. ವಂಡ್ಸೆ ಅತ್ಯಂತ ಸಣ್ಣ ಗ್ರಾಮ ಅತ್ಯಂತ ಕನಿಷ್ಠ ಆದಾಯ ಹೊಂದಿದ್ದ ಪಂಚಾಯತ್ ಆಗಿತ್ತು, ಇದೀಗ ಕಸ ನಿರ್ವಹಣೆಯ ಬಳಿಕ ಪಂಚಾಯತ್ ಕೋಟಿ ಅದಾಯಗಳಿಸುವ ಪಂಚಾಯತ್ ಆಗಿ ಮಾರ್ಪಟ್ಟಿದೆ ಎಂದು ಅವರು ತಿಳಿಸಿದರು.

ತ್ಯಾಜ್ಯಗಳನ್ನು ಸಂಪನ್ಮೂಲವಾಗಿ ಪರಿವರ್ತಿಸಿ ದೇಶದ ಗಮನ ಸೆಳೆದ ವಂಡ್ಸೆ ಪಂಚಾಯತ್ ಅಧ್ಯಕ್ಷರಿಗೆ ಜನ ಶಿಕ್ಷಣ ಟ್ರಸ್ಟ್ ವತಿಯಿಂದ "ಅವಾರ್ಡ್ ಆಫ್ ಸೇನಿಟೇಶನ್ ಅಕ್ಷಲೆನ್ಸ್" ನೀಡಿ ಗೌರವಿಸಲಾಯಿತು.

ಈ ವೇಳೆ ಬಂಟ್ವಾಳ ತಾಲೂಕಿನ ಸಂಜೀವಿನಿ ಒಕ್ಕೂಟದ ಸ್ವಚ್ಚ ಮನೆ ಸ್ವಾಭಿಮಾನಿ ಕುಟುಂಬ ಸ್ವಯಂ ಘೋಷಣಾ ಪತ್ರಗಳ 3 ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಯಿತು.

ಬೆಳಕಿಲ್ಲದ ವಿಶೇಷ ಚೇತನ ಮಂಜುನಾಥ್ ಭಟ್ ರವರ ಗೂಡಂಗಡಿಗೆ ಸೆಲ್ಕೊ ಸೋಲಾರ್ ಕಂಪೆನಿ ವತಿಯಿಂದ ಉಚಿತವಾಗಿ ನೀಡಿದ ಸೋಲಾರ್ ದೀಪ ವನ್ನು ಹಸ್ತಾಂತರಿಸಲಾಯಿತು. ಸ್ಮೈಲ್ ಸ್ಕಿಲ್ ಸ್ಕೂಲ್ ನ ಕಂಪ್ಯೂಟರ್ ಮತ್ತು ಹೊಲಿಗೆ ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಪ್ರತಿವರ್ಷ ಅಕ್ಷರೋತ್ಸವ ನಡೆಸಿಕೊಂಡು ಬರುತ್ತಿರುವ ಪುತ್ತೂರು ತಾಲೂಕಿನ ಬನ್ನೂರು ಗ್ರಾಮ ವಿಕಾಸ ಕೇಂದ್ರದ ಪ್ರೇರಕಿ ಅರುಣ, ಕಡುಬು ತಾಲೂಕು ಪೆರಾಬೆಯ ಪ್ರೇರಕಿ ಮೋಹಿನಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಅಕ್ಷರೋತ್ಸವ ಸ್ವರಾಜ್ ಸಂತೆಯಲ್ಲಿ ಪ್ರಕಾಶ್ ಭಟ್, ಸಾವಿತ್ರಿ, ಲತಾ ಮಾಲಾಜೆ ಯವರ ಹಳ್ಳಿ ಮನೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಸೆಲ್ಕೊ ಸೋಲಾರ್ ನ ಮಾಹಿತಿ ಕೇಂದ್ರದ ಮೂಲಕ ಸುಸ್ಥಿರ ಬೆಳಕು ಸುಸ್ಥಿರ ಜೀವನೋಪಾಯ ಕುರಿತು ಪ್ರೇರಣೆ ನೀಡಲಾಯಿತು.

ಬನ್ನೂರು ಕುಂಬುರಗದ ದುಡಿ ಕುಣಿತ, ಕಾನ್ಯಾನದ ಗಿರಿ ಸಿರಿ ಆದಿವಾಸಿ ಕಲಾ ತಂಡದ ದೋಲು ಕುಣಿತ ಸ್ಮೈಲ್ ಸ್ಕಿಲ್ ಸ್ಕೂಲ್, ಸಾಕ್ಷರತೆ, ಸ್ವಚ್ಚತಾ ಅಭಿಯಾನದ ಸ್ವಯಂ ಸೇವಕರು, ಸಾಂತ್ವನ ಕಾರ್ಯಕರ್ತರು, ಎಸ್ ಐವಿ ವಿದ್ಯಾರ್ಥಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು.ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾ ನಿಂತು ಮತ್ತು ವಾಮದಪದವು ಕಾಲೇಜಿನ ಸಮಾಜಕಾರ್ಯ ವಿದ್ಯಾರ್ಥಿಗಳು ಸಾಕ್ಷರತೆ ಸ್ವಚ್ಚತೆಯ ಸಂದೇಶ ಸಾರುವ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಜನ ಜೀವನ ಅಧ್ಯಕ್ಷ ರಾಧಾಕೃಷ್ಣ ರೈ ಉಮಿಯ, ಜಮೀಯ್ಯತುಲ್ ಫಲಾಹ್ ನ ಅಬ್ದುನ್ನಾಸಿರ್ ,ಇಬ್ರಾಹಿಂ ನಡುಪದವು, ಪಂಚ ಗ್ಯಾರಂಟಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಮಾಣಿ ಪಂಚಾಯತ್ ಅಧ್ಯಕ್ಷ ಸುಭಿತ್ ಶೆಟ್ಟಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್, ಸೆಲ್ಕೊ ಮೆನೇಜರ್ ರವೀಣ, ವಯಸ್ಕರ ಶಿಕ್ಷಣ ಇಲಾಖೆಯ ರಾಧಲಕ್ಷ್ಮಿ, ಬಂಟ್ವಾಳ ತಾಲೂಕು ಎನ್ಆರ್ ಎಲ್ ಎಮ್ ಮೇನೇಜರ್ ಸುಧಾ, ಸಾಹಿತಿ ಚಂದ್ರಹಾಸ ಕಣಂತೂರು, ಶ್ಯಾಮ್ ಭಟ್, ಚಂದ್ರ ಶೇಖರ ಪಾತೂರು, ಶರ್ಮಿಳ ಕಣಂತೂರು, ಪಂಚಾಯತ್ ಸದಸ್ಯರಾದ ಉಷಾ, ಶೆಮೀಮ, ಶೇಕಬ್ಬ, ಸ್ವಚ್ಚತಾ ಸೇನಾನಿ ಓಸ್ವಾಲ್ಡ್ ಸಾಲ್ದಾನ, ಅಬೂಬಕರ್‌ ಜಲ್ಲಿ, ನವಸಾಕ್ಷರರ ಮುಖಂಡರಾದ ಯಶೋಧಾ, ನಾರಾಯಣ, ಸುಮತಿ, ರತ್ನ ಉಪಸ್ಥಿತರಿದ್ದರು. ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಸ್ವಚ್ಚತಾ ಸಂವಾದ ನಿರ್ವಹಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News