ಮಂಗಳೂರು | ಪೇಜಾವರ ವಿಶ್ವೇಶತೀರ್ಥರ ಬಗ್ಗೆ ಪ್ರಬಂಧ ಸ್ಪರ್ಧೆ
ಸಾಂದರ್ಭಿಕ ಚಿತ್ರ
ಮಂಗಳೂರು, ಡಿ.4: ಪೇಜಾವರ ವಿಶ್ವೇಶತೀರ್ಥರ ಪುಣ್ಯತಿಥಿಯ ಸಲುವಾಗಿ ಡಿ.29ರಂದು ಜರಗಲಿರುವ ಕಾರ್ಯಕ್ರಮದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನವು ವಿಶ್ವೇಶತೀರ್ಥರ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.
ಕಾಲೇಜು ಹಾಗೂ ಮುಕ್ತ ಎಂಬ ಎರಡು ಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಬಂಧವನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬರೆಯಬಹುದಾಗಿದೆ.
ಪ್ರಬಂಧದ ವಿಷಯ : ಕಾಲೇಜು ವಿಭಾಗ - ರಾಷ್ಟ್ರ ಮತ್ತು ಧರ್ಮ ವಿಶ್ವೇಶತೀರ್ಥರ ಚಿಂತನೆ ನಾನು ಕಂಡಂತೆ. ಮುಕ್ತ ವಿಭಾಗ - ವಿಶ್ವೇಶತೀರ್ಥರು, ಯತಿವರ್ಯರು ವಿಶ್ವ ಮಾನ್ಯರು, ಅವಲೋಕನ-ಅನುಸಂಧಾನ.
ಪ್ರಬಂಧವನ್ನು ಮೂರು ಪುಟಗಳಿಗೆ ಮೀರದಂತೆ ಬರೆದು ಡಿ.24ರೊಳಗೆ ಸ್ವವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೋಡಿಯಾಲ್ಬೈಲ್, ಮಂಗಳೂರು ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ನೀಡಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.