×
Ad

ಮಂಗಳೂರು | ʼಮಾದರಿ ಮದುವೆʼ ಪ್ರೊಮೋಶನ್ ಕೌನ್ಸಿಲ್ ಅಸ್ತಿತ್ವಕ್ಕೆ

Update: 2025-11-25 14:57 IST

ಮಂಗಳೂರು: ಮದುವೆಗಳನ್ನು ಅನಾಚಾರಮುಕ್ತಗೊಳಿಸುವ ಮತ್ತು ಮದುವೆಯ ಆರ್ಥಿಕ ಭಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಹಮ್ಮಿಕೊಂಡ 'ಮಾದರಿ ಮದುವೆ: ಶತದಿನ ಅಭಿಯಾನ'ದ ಯಶಸ್ಸಿಗಾಗಿ ಪ್ರೊಮೋಶನ್ ಕೌನ್ಸಿಲ್ ರೂಪಿಸಲಾಯಿತು.

ಇದರ ಚೇರ್ಮಾನ್ ಆಗಿ ಡಾ.ಶೇಖ್ ಬಾವ ಹಾಜಿ, ಕನ್ವೀನರ್ ಆಗಿ ಡಾ.ಎಮ್ಮೆಸ್ಸಂ ಝೈನಿ ಕಾಮಿಲ್ ಹಾಗೂ ಕೋರ್ಡಿನೇಟರ್ ಆಗಿ ಮುಹಮ್ಮದ್ ಅಲೀ ತುರ್ಕಳಿಕೆ ಅವರನ್ನು ಆಯ್ಕೆಮಾಡಲಾಯಿತು.

ಉಪಾಧ್ಯಕ್ಷರಾಗಿ ಮುಹ್ಯಿದ್ದೀನ್ ಸಖಾಫಿ ತೋಕೆ, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಹನೀಫ್ ಹಾಜಿ ಉಳ್ಳಾಲ, ಕಾರ್ಯದರ್ಶಿಗಳಾಗಿ ಕೆಕೆಎಂ ಕಾಮಿಲ್ ಸಖಾಫಿ ಮತ್ತು ಮುಹಮ್ಮದ್ ಮದನಿ ಪೂಡಲ್, ಸದಸ್ಯರಾಗಿ ಜಿ.ಎಂ.ಕಾಮಿಲ್ ಸಖಾಫಿ, ಹಮೀದ್ ಹಾಜಿ ಕೊಡುಂಗಾಯಿ, ಮನ್ಸೂರ್ ಕೋಡಿ ಕುಂದಾಪುರ, ಇಕ್ಬಾಲ್ ಕೃಷ್ಣಾಪುರ, ಮುಜೀಬ್ ಕೊಡಗು, ತೌಸೀಫ್ ಅಸ್ಅದಿ ಅವರನ್ನು ಆಯ್ಕೆಮಾಡಲಾಯಿತು.

ಈ ಸಂಬಂಧ ಮಂಗಳೂರಿನ ಎಸ್ ವೈ ಎಸ್ ರಾಜ್ಯ ಕಚೇರಿಯಲ್ಲಿ ನಡೆದ ಸಾರಥ್ಯ ಸಂಗಮದಲ್ಲಿ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸೈಯದ್‌ ಇಲ್ಯಾಸ್ ತಂಙಳ್ ಎಮ್ಮೆಮಾಡು ಪ್ರಾರ್ಥನೆ ನಡೆಸಿದರು. ಜಂಇಯತುಲ್ ಉಲಮಾ ಕೇಂದ್ರ ಸಮಿತಿ ಸದಸ್ಯರಾದ ಜಿ ಎಂ ಕಾಮಿಲ್ ಸಖಾಫಿ ಉದ್ಘಾಟಿಸಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಡಾ.ಝೈನಿ ಕಾಮಿಲ್, ಎಸ್.ಎಂ.ಎ. ಉಪಾಧ್ಯಕ್ಷ ಕೆ.ಕೆ.ಎಂ.ಕಾಮಿಲ್ ಸಖಾಫಿ, ಜಂಇಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮದನಿ ಪೂಡಲ್, ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲೀ ತುರ್ಕಳಿಕೆ, ಉಳ್ಳಾಲ ದರ್ಗಾಧ್ಯಕ್ಷ ಹನೀಫ್ ಹಾಜಿ, ಕೆ ಸಿ ಎಫ್ ಮಾಜಿ ಅಧ್ಯಕ್ಷ ಡಾ ಶೇಖ್ ಬಾವ, ಕೆಎಂಜೆ ರಾಜ್ಯ ಕಾರ್ಯದರ್ಶಿ ಸಾದಿಕ್ ಮಲೆಬೆಟ್ಪು ಮಾತನಾಡಿದರು. ಹಫೀಳ್ ಸಅದಿ ಮಡಿಕೇರಿ, ಕೆ.ಎಚ್.ಇಸ್ಮಾಯಿಲ್ ಸಅದಿ, ಅನಸ್ ಸಿದ್ದೀಖಿ ಶಿರಿಯ, ಇಸ್ಮಾಯಿಲ್ ಸಅದಿ ಉರುಮನೆ, ಕಲ್ಕಟ್ಟ ರಝ್ವಿ ಉಡುಪಿ, ಇಬ್ರಾಹೀಂ ಖಲೀಲ್ ಮಾಲಿಕಿ, ಮಹ್ಬೂಬ್ ಸಖಾಫಿ ಕಿನ್ಯ, ಇಬ್ರಾಹೀಂ ನಈಮಿ ಉರುಮಣೆ ಉಪಸ್ಥಿತರಿದ್ದರು. ಕೆ.ಎಂ.ಅಬೂಬಕರ್ ಸಿದ್ದೀಖ್ ಸ್ವಾಗತಿಸಿ, ಮನ್ಸೂರ್ ಅಲಿ ಶಿವಮೊಗ್ಗ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News