ಮಂಗಳೂರು | ಬಡವರ ಸೇವೆಗೆ ದೇವರ ಆಶೀರ್ವಾದ ಇದೆ : ಪೀಟರ್ ಪಾವ್ಲ್ ಸಲ್ದಾನ
ಮಂಗಳೂರು, ಜ.26: ಬಡವರಿಗಾಗಿ ಮಾಡುವ ಸಹಾಯಕ್ಕೆ ದೇವರ ಆಶೀರ್ವಾದ ಸದಾ ಇದೆ. ಬಡವರ ಸೇವೆಯಲ್ಲಿ ದೇವರನ್ನು ಕಾಣಲು ಸಾಧ್ಯವಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಪೀಟರ್ ಪಾವ್ಲ್ ಸಲ್ಡಾನಾ ಹೇಳಿದ್ದಾರೆ
ಮಂಗಳೂರು ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್ ನಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಸಂತ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿ ಇದರ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ದ.ಕ. ಜಿಲ್ಲೆಯ ಅರ್ಹ ಬಡರೋಗಿಗಳಿಗಾಗಿ ಶೇ.50 ರಿಯಾಯತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡುವ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.
ಎರಡನೇ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಜೋಸೆಫ್ ಮಿನೇಜಸ್ ಸಾಸ್ತಾನ ಇವರ ನೇತೃತ್ವದಲ್ಲಿ ಮತ್ತು ಫ್ರೀಡಾ ರೇಗೊ ಮತ್ತು ಜಾನೆಟ್ ಫೆರ್ನಾಂಡಿಸ್ ಇವರ ಸಹಕಾರದೊಂದಿಗೆ ಟ್ರಿನಿಟಿ ಮೆಡಿಕೇರ್ ಸರ್ವಿಸ್ ಈ ಯೋಜನೆಯನ್ನು ಕೈಗೊಳ್ಳಲಾಗಿದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಮಾತನಾಡಿ ಕ್ರೈಸ್ತ ಸಮುದಾಯ ತನ್ನ ಸೇವೆಯ ಮೂಲಕ ಜಗತ್ತಿಗೆ ಮಾದರಿಯಾಗಿದೆ ಎಂದರು.
ಟ್ರಿನಿಟಿ ಮೆಡಿಕೇರ್ ಸರ್ವಿಸ್ ಇದರ ರೂವಾರಿ ಜೊಸೇಫ್ ಮಿನೇಜಸ್, ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆಯ ಅಂತರಾಷ್ಟ್ರೀಯ ಅಧ್ಯಕ್ಷ ಜುವಾನ್ ಮಾನ್ವೆಲ್ ಬ್ಯೂರೆಗೊ ಗೋಮ್ಸ್, ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಜೂಡ್ ಮಂಗಳ್ರಾಜ್, ಅಂತರ್ರಾಷ್ಟ್ರೀಯ ಜನರಲ್ ಕೌನ್ಸಿಸ್ ವಿಶೇಷ ಒಂಬುಡ್ಸ್ಮನ್ ಜೋಸೆಫ್ ಪಾಂಡ್ಯನ್, ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂ.ಫಾವುಸ್ತಿನ್ ಲೂಕಾಸ್ ಲೋಬೊ, ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಸಾಂತಿಗೂ ಮಾನಿಕ್ಯಮ್, ಸಂಯೋಜಕರಾದ ಆಶಾ ವಾಜ್, ಯುವ ಪ್ರತಿನಿಧಿ ಆಲಿಸ್ಟರ್ ನಜರೆತ್, ಸೈಂಟ್ ವಿನ್ಸೆಂಟ್ ದಿ ಪಾವ್ಲ್ ಕೇಂದ್ರ ಸಮಿತಿಯ ಅಧ್ಯಕ್ಷ ಗ್ಯಾಬ್ರಿಯಲ್ ಜೋ ಕುವೆಲ್ಲೊ, ಆಧ್ಯಾತ್ಮಿಕ ನಿರ್ದೇಶಕ ವಂ. ಫ್ಲೇವಿಯಾನ್ ಲೋಬೊ, ಕಾರ್ಯದರ್ಶಿ ಲಿಗೋರಿ ಫೆರ್ನಾಂಡಿಸ್, ಕೋಶಾಧಿಕಾರಿ ಕ್ಲಾರೆನ್ಸ್ ಮಚಾದೊ, ಸಂಚಾಲಕರಾದ ಫಿಲೋಮಿನಾ ಮಿನೇಜಸ್ ಉಪಸ್ಥಿತರಿದ್ದರು.