ಮಂಗಳೂರು | ಬಸ್‌ನಲ್ಲಿ ಚಿನ್ನಾಭರಣವಿದ್ದ ಬ್ಯಾಗ್ ಕಳವು : ದೂರು ದಾಖಲು
ಮಂಗಳೂರು, ಜ.26: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿರುವ ವ್ಯಾನಿಟಿ ಬ್ಯಾಗ್ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ನ್ನಿಂದ ಕಳವಾದ ಘಟನೆ ವರದಿಯಾಗಿದೆ.
ಮಂಗಳೂರಿನ ದೇವಸ್ಥಾನಗಳಿಗೆ ದರ್ಶನ ಪಡೆಯಲು ಬಂದಿದ್ದ ಪದ್ಮಜಾ ಎಂಬವರು ಜ.23ರಂದು ಬೆಂಗಳೂರಿಗೆ ವಾಪಸಾಗಲು ಮಂಗಳೂರು ಬಸ್ ನಿಲ್ದ್ದಾಣದಲ್ಲಿ ರಾತ್ರಿ 7:15ಕ್ಕೆ ಬಸ್ ನ ಕ್ಯಾಬಿನ್ ನಲ್ಲಿ ಬ್ಯಾಗನ್ನು ಇಟ್ಟಿದ್ದರು.
ಬಸ್ ಹೊರಟು ಸ್ವಲ್ಪ ದೂರ ತಲುಪಿದಾಗ ಚಿನ್ನಭರಣವಿರುವ ಬ್ಯಾಗ್ ಕಾಣೆಯಾಗಿತ್ತು. ನಂತರ ಬಸ್ ಅನ್ನು ನಿಲ್ಲಿಸಿ ಬಸ್ ನ ಎಲ್ಲಾ ಕಡೆ ಹುಡುಕಾಡಿದರೂ ಬ್ಯಾಗ್ ಸಿಗಲಿಲ್ಲ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳರು ಅವರ ಬ್ಯಾಗ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಬ್ಯಾಗ್ ನಲ್ಲಿ 20 ಸಾವಿರ ರೂಪಾಯಿ ನಗದು ಹಣ, 18 ಗ್ರಾಂ ತೂಕದ ಎರಡು ಚಿನ್ನದ ಬಳೆ , 18 ಗ್ರಾಂ ತೂಕದ ಚಿನ್ನದ ಚೈನ್, 6 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ,3 ಗ್ರಾಂ ತೂಕದ ಒಂದು ಚಿನ್ನದ ಉಂಗುರ ಸೇರಿದಂತೆ ಒಟ್ಟು 45 ಗ್ರಾಂ ತೂಕದ ಚಿನ್ನಾಭರಣ, 1ಇಯರ್ ಫೋನ್ ಚಾರ್ಜರ್, 2 ಪೆನ್ ಡ್ರೈವ್ ಗಳು-ಸೇರಿದಂತೆ ಒಟ್ಟು 4,80,000 ರೂ. ಮೊತ್ತದ ಸೊತ್ತುಗಳು ಕಳವಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.